ಜಿಎಸ್‌ಟಿ ಬದಲಾವಣೆ ಸಾರ್ವಜನಿಕರಿಗೆ ಅನುಕೂಲ

oplus_0
oplus_0
Published on

ಬೆಳಗಾವಿ: ಕೇಂದ್ರ ಸರ್ಕಾರ ಜಿಎಸ್‌ಟಿಯಲ್ಲಿ ತಂದಿರುವ ಬದಲಾವಣೆ ಅತ್ಯಂತ ಸರಳವಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸಿಜಿಎಸ್‌ಟಿ ಜಂಟಿ ಆಯುಕ್ತ ಡಾ.ರಾಜೇಶ ಮುಂಡೆ ಹೇಳಿದರು.

ನಗರದ ಬೆಳಗಾವಿಯ ವಾಣಿಜ್ಯೋದ್ಯಮ ಸಂಘದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಎಸ್‌ಟಿ ರಿಫಾರ್ಮ್ಸ್ ವಿಚಾರ ಸಂಕಿರಣದಲ್ಲಿ ಮಾತನಾಡಿ, ನವರಾತ್ರಿ ಆರಂಭದ ದಿನದಿಂದಲೇ ಸರಳೀಕೃತ ಜಿಎಸ್‌ಟಿ ಜಾರಿಗೆ ತರಬೇಕೆಂದು ಪ್ರಧಾನಮಂತ್ರಿ ನಿರ್ಧರಿಸಿದ್ದರು ಎಂದರು.

ಬೆಳಗಾವಿ ಲೆಕ್ಕ ಪರಿಶೋಧಕರ ಸಂಘ (ಸಿಎ)ದ ಅಧ್ಯಕ್ಷ ವೀರಣ್ಣ ಮುರಗೋಡ ಮಾತನಾಡಿ, ವಿಶ್ವದಲ್ಲೇ ಉತ್ತಮ ತೆರಿಗೆ ಪದ್ಧತಿ ಜಿಎಸ್‌ಟಿಯಾಗಿದ್ದು, ಹಲವಾರು ದೇಶಗಳು ಉತ್ತಮ ತೆರಿಗೆ ಪದ್ಧತಿ ಅಳವಡಿಸಿಕೊಳ್ಳಲು ಕಷ್ಟಪಡುತ್ತಿರುವಾಗ ಭಾರತ ಈ ವಿಷಯದಲ್ಲಿ ಮುಂದೆ ಹೋಗಿದೆ. 8 ವರ್ಷದ ಹಿಂದೆ ಜಾರಿಗೆ ಬಂದಿರುವ ಜಿಎಸ್‌ಟಿಯನ್ನು ಇನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಜಿಎಸ್‌ಟಿ-2 ಜಾರಿಗೆ ಬಂದಿದ್ದರಿಂದ ಶೀಘ್ರದಲ್ಲೇ ದೇಶದ ಆರ್ಥಿಕತೆ ಸುಧಾರಣೆ ಕಾಣಲಿದೆ ಎಂದರು.

ಕರ್ನಾಟಕ, ಮಹಾರಾಷ್ಟ್ರ ಮೊದಲಾದವು ಉತ್ಪಾದಕ ರಾಜ್ಯಗಳಾಗಿದ್ದು, ಅತೀ ಹೆಚ್ಚು ಜಿಎಸ್‌ಟಿ ನೀಡುವ ರಾಜ್ಯಗಳಾಗಿವೆ. ಯಾರಿಗಾದರೂ ಅಸಮಾಧಾನ, ಅನುಮಾನಗಳಿದ್ದರೆ ಕೇಂದ್ರ ಜಿಎಸ್‌ಟಿ ಮಂಡಳಿಗೆ ಮನವಿ ಸಲ್ಲಿಸಬಹುದು ಎಂದರು.

ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನ್ನೋಳ್ಳಿ, ತೆರಿಗೆ ಸಮಿತಿ ಚೇರ್ಮನ್ ವಿಕ್ರಂ ಜೈನ, ಕಾರ್ಯದರ್ಶಿ ಸತೀಶ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net