ಜಿಎಸ್‌ಟಿ ಇಳಿಕೆ ಕ್ರಾಂತಿಕಾರಕ ನಿರ್ಧಾರ

16KUDLIGI1
Published on

ಕೂಡ್ಲಿಗಿ: ಜಿಎಸ್‌ಟಿ ಇಳಿಕೆಯಿಂದ ಅದರ ನೇರ ಲಾಭ ಜನರಿಗೆ ಸಿಗಲಿದ್ದು, ಈ ಮೂಲಕ ಜನರಲ್ಲಿ ಹಣ ಉಳಿತಾಯವಾಗಿ ಖರೀದಿ ಸಾಮರ್ಥ್ಯ ಹೆಚ್ಚಳವಾಗಲಿದೆ ಎಂದು ಬಿಜೆಪಿ ವ್ಯಾಪಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಜಿ.ಎಸ್.ಪ್ರಶಾಂತ ಹೇಳಿದರು.

ಪಟ್ಟಣದ ಜ್ಞಾನಭಾರತಿ ಕಾಲೇಜಿನಲ್ಲಿ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸ್ವಾತಂತ್ರ್ಯದ ಬಳಿಕ ತೆರಿಗೆ ಪದ್ಧತಿಯಲ್ಲಿ ತೆಗೆದುಕೊಂಡು ಕ್ರಾಂತಿಕಾರಕ ಸುಧಾರಣೆ ಇದಾಗಿದ್ದು, ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಎಲ್ಲ ರಾಜ್ಯಗಳು ಸರ್ವಾನುಮತದಿಂದ ಅಂಗೀಕರಿಸಿ, ದರ ಇಳಿಕೆಗೆ ಸಮ್ಮತಿಸಿವೆ. ಎನ್‌ಡಿಎ ಸರ್ಕಾರ ರಾಜಕೀಯ ಪ್ರಬುದ್ಧತೆ ಮತ್ತು ಚತುರತೆಗೆ ಸಾಕ್ಷಿಯಾಗಿರುವ ನಿರ್ಧಾರ ಇದು. ಇದು ರಾತ್ರೋರಾತ್ರಿ ತೆಗೆದುಕೊಂಡ ನಿರ್ಣಯವಲ್ಲ ಎಂದರು.

ಹಿಂದಿನ 4 ಸ್ಲ್ಯಾಬ್‌ಗಳನ್ನು ಶೇ.5 ಮತ್ತು ಶೇ.18ಕ್ಕೆ ನಿಗದಿಪಡಿಸಿ 140 ಕೋಟಿ ಭಾರತೀಯರಿಗೆ ಅನುಕೂಲ ಮಾಡಿಕೊಡಲಾಗಿದೆ. ಶೇ. 12ರ ಸ್ಲ್ಯಾಬ್‌ನಲ್ಲಿದ್ದ ಶೇ.99 ಸರಕುಗಳು ಹಾಗೂ ಶೇ 28 ರ ಸ್ಲ್ಯಾಬ್‌ನಲ್ಲಿದ್ದ ಶೇ.90 ಸೇವಾ ದರಗಳಲ್ಲಿ ಭಾರಿ ಕಡಿತವಾಗಿದೆ. ಆದರೆ, ವಿರೋಧ ಪಕ್ಷಗಳು ಅನಗತ್ಯವಾಗಿ ವಿರೋಧಿಸುತ್ತಿವೆ ಎಂದು ಜಿ.ಎಸ್.ಪ್ರಶಾಂತ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಪರಿಕಲ್ಪನೆಯನ್ನು ನಾವು ಅನುಸರಿಸಬೇಕಿದೆ. ಸ್ವದೇಶಿ ಉತ್ಪನ್ನಗಳನ್ನು ಬಳಸಿ ದೇಶದ ಆರ್ಥಿಕತೆಯನ್ನು ಭದ್ರಪಡಿಸಬೇಕು ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ಕೆ.ನಾಗರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ, ಕಾರ್ಯದರ್ಶಿ ರೇಖಾ ಮಲ್ಲಿಕಾರ್ಜುನ, ಪ್ರಮುಖರಾದ ಬಿ.ಸೂರ್ಯಪಾಪಣ್ಣ, ಭದ್ರವಾಡಿ ಚಂದ್ರಶೇಖರ್, ದೀನಾ ಮಂಜುನಾಥ, ಎಚ್.ರೇವಣ್ಣ, ಮನೋಹರ ಗುಪ್ತ, ಸಿದ್ದೇಶ್, ಪಿ.ಮಂಜುನಾಥ, ಹಾರಕಬಾವಿ ಕೊಟ್ರೇಶ್, ಪವಿತ್ರಾ, ಸಚಿನ್ ಕುಮಾರ್, ಶಂಕರ ಮೇಟಿ, ಪ್ರಕಾಶ್, ಪೂಜಾರ ಮಲ್ಲಿಕಾರ್ಜುನ, ಭರತ್ ರಾಮ್, ಅಜೇಯ್ ನೀರ್ಕಲ್, ಕರಿಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net