ಜಿಂದಾಲ್ ನ ಮೂವರು ಅಧಿಕಾರಿಗಳು ಮೃತ

jindal
Published on

ಬಳ್ಳಾರಿ : ಸಂಡೂರು ತಾಲೂಕಿನ ಜಿಂದಾಲ್ ನ ಹೆಚ್‌ಎಸ್‌ಎಂ ಘಟಕದ ಸುರಂಗದ ದುರಸ್ತಿ ವೇಳೆ ಏಕಾಏಕಿ ನೀರು ಹರಿದು ಮೂವರು ಅಧಿಕಾರಿಗಳು ಗುರುವಾರ ಮೃತಪಟ್ಟಿದ್ದಾರೆ.
ಹೊಸಪೇಟೆ ನಿವಾಸಿ ಗಂಟೆ ಜಡೆಪ್ಪ, ತಮಿಳುನಾಡು ಮೂಲದ ಸಹಾಯಕ ವ್ಯವಸ್ಥಾಪಕ ಎಂ. ಶಿವಮಹಾದೇವ, ಬೆಂಗಳೂರಿನ ಸುಶಾಂತ ಕೃಷ್ಣಾ ನೈನಾರು (22) ಮೃತರು. ಜಿಂದಾಲ್ ನ ಹೆಚ್‌ಎಸ್‌ಎಂ ಘಟಕದ 70 ಅಡಿ ಅಳದ ಸುರಂಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಿಂದ ನೀರಿನ ಹರಿವು ಸ್ಥಗಿತಗೊಂಡಿತ್ತು. ಕೂಡಲೇ ಮೂವರು ಅಧಿಕಾರಿಗಳು ಸುರಂಗವನ್ನು ಪರಿಶೀಲಿಸಲು ಪ್ರವೇಶಿಸಿದ್ದಾರೆ. ಸುರಂಗದಲ್ಲಿ ನೀರು ಏಕಾಏಕಿ ಸುರಿಯಲಾರಂಭಿಸಿದಾಗ ಮೂವರೂ ಕೊಚ್ಚಿಹೋಗಿ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಳ್ಳಾರಿಯ ವಿಮ್ಸ್ ಶವಾಗಾರದಲ್ಲಿ ಮೃತ ದೇಹಗಳನ್ನು ಇಡಲಾಗಿದೆ. ಮೃತ ಕುಟುಂಬಸ್ಥರು ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ರಂಜಿತ್ ಕುಮಾರ ಬಂಡಾರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net