ಜಿಂಕೆ ರಕ್ಷಣೆ ಮಾಡಿದ ಗ್ರಾಮಸ್ಥರು

02Rajesh5
Published on

ಚಾಮರಾಜನಗರ: ಕಾಡಿನಿಂದ ತಾಲೂಕಿನ ಬದನಗುಪ್ಪೆ ಗ್ರಾಮಕ್ಕೆ ಬಂದಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆಗೆ ಕೊಟ್ಟಿದ್ದಾರೆ.

ತಾಲೂಕಿನ ಉಮ್ಮತ್ತೂರು ಕೃಷ್ಣಮೃಗಗಳ ತಾಣವಾಗಿದೆ. ಇದರ ಸಮೀಪದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶವಿದೆ. ಇಲ್ಲಿನ ಜಮೀನಿನ ಕಡೆ 2 ವರ್ಷದ ಗಂಡು ಜಿಂಕೆ ಗುರುವಾರ ಕಾಣಿಸಿಕೊಂಡಿದೆ. ಬೀದಿನಾಯಿಗಳಿಗೆ ಹೆದರಿ ಬದನಗುಪ್ಪೆ ಗ್ರಾಮದ ಕಡೆಗೆ ಬಂದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿ ಜಿಂಕೆ ಹಿಡಿಯಲು ಪ್ರಯತ್ನಿಸಿದರು. ಆದರೆ ಬಲೆಗೆ ಜಿಂಕೆ ಸಿಲುಕದೆ ಇದ್ದಾಗ ಸ್ಥಳದಲ್ಲಿದ್ದ ಗ್ರಾಮಸ್ಥರೆಲ್ಲರೂ ಸೇರಿ ಜಿಂಕೆಯನ್ನು ಸೆರೆ ಹಿಡಿಯಲು ನೆರವಾದರು. ರಕ್ಷಣೆ ಮಾಡಿದ ಜಿಂಕೆಯನ್ನು ಕಾಡಿಗೆ ಬಿಡಲಾಯಿತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net