ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರ ಸೆರೆ

7 smg 3
Published on

ಶಿವಮೊಗ್ಗ: ಪೊಲೀಸ್ ಹಾಗೂ ಅರಣ್ಯ ಇಲಾಖೆ ತಂಡ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ 103 ಕೆಜಿ ಜಿಂಕೆ ಮಾಂಸ ಮತ್ತು ಆಟೋ ಜಪ್ತಿ ಮಾಡಿದೆ. ಶ್ರೀರಾಂಪುರದ ಮಂಜುನಾಥ್ ಅಲಿಯಾಸ್ ಜಿಂಕೆ ಮಂಜ (30) ಹಾಗೂ ಮಲ್ಲಿಗೇನಹಳ್ಳಿಯ ಉಮೇಶ್ ನಾಯ್ಕ (32)ಬಂಧಿತರು. ಆಟೋದಲ್ಲಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತುಂಗಾನಗರ ಪಿಎಸ್​ಐ ತಿರುಮಲೇಶ್ ಹಾಗೂ ಶಂಕರ ವಲಯದ ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಮಜೀದ್ ನೇತೃತ್ವದ ತಂಡ ಆಟೋ ತಡೆದು ಪರಿಶೀಲಿಸಿದಾಗ 5 ಪ್ಲಾಸ್ಟಿಕ್ ಚೀಲಗಳಲ್ಲಿ ಜಿಂಕೆ ಮಾಂಸ ಸಿಕ್ಕಿದೆ.

ಆಯನೂರು ಸಮೀಪದ ಚನ್ನಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಭೇಟೆಯಾಡಿದ್ದರು ಎನ್ನಲಾಗಿದೆ. ಬಂಧಿತರಿಂದ 103 ಕೆಜಿ ಜಿಂಕೆ ಮಾಂಸ, 800 ರೂ. ನಗದು ಹಾಗೂ ಆಟೋ ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಭಾನುವಾರ ಬೆಳಗ್ಗೆಯಷ್ಟೇ ಮಂಡಘಟ್ಟ ಸಮೀಪ ಜಿಂಕೆ ಭೇಟೆಯಾಡಿದ್ದ ಇಬ್ಬರನ್ನು ಬಂಧಿಸಿದ್ದ ಕುಂಸಿ ಪೊಲೀಸರು, 40 ಕೆಜಿ ಮಾಂಸ ಜಪ್ತಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net