ಜಿಂಕೆ ಮಾಂಸ ಮಾರುತ್ತಿದ್ದ ಇಬ್ಬರ ಸೆರೆ

5bdvt5
Published on

ಭದ್ರಾವತಿ: ಉಂಬ್ಳೆಬೈಲು ವಲಯ ಅರಣ್ಯ ವಿಭಾಗ ವ್ಯಾಪ್ತಿಯ ಕಣಗಲಸರ ಗ್ರಾಮದಲ್ಲಿ 2 ಜಿಂಕೆಗಳನ್ನು ಕೊಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬಂಧಿಸಿ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಣಗಲಸರ ಗ್ರಾಮ ನಿವಾಸಿಗಳಾದ ದಿನೇಶ್ ಮತ್ತು ರಮೇಶ ಬಂಧಿತು. ಆರೋಪಿಗಳಿಂದ 2 ಜಿಂಕೆ ಚರ್ಮ, ಮಾಂಸ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಕಣಗಲಸರದ ದಿವಾಕರ, ನಾಗರಾಜ, ಉಂಬ್ಳೆಬೈಲು ನಿವಾಸಿಗಳಾದ ಶಿವಾನಂದ, ದೀಪು ತಲೆಮರೆಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ಉಪವಲಯ ಅರಣ್ಯಾಧಿಕಾರಿ ಅಬ್ದುಲ್ ಕರೀಮ್ ಮುಬಾರಕ್, ಗಿಡ್ಡಸ್ವಾಮಿ, ಸುನಿಲ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net