ಜಿಂಕೆ ಮರಿ ರಕ್ಷಣೆ

09 TKE 4 web
Published on

ತರೀಕೆರೆ: ತಾಲೂಕಿನ ನಂದಿಬಟ್ಟಲು ಗ್ರಾಮದೊಳಗೆ ಬಂದಿದ್ದ ಜಿಂಕೆ ಮರಿಯನ್ನು ಗ್ರಾಮಸ್ಥರು ಬೀದಿ ನಾಯಿಗಳಿಂದ ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ಗುಂಪಿನಿಂದ ಬೇರ್ಪಟ್ಟು ಮಂಗಳವಾರ ಬೆಳ್ಳಂಬೆಳಗ್ಗೆಯೇ ಗ್ರಾಮಕ್ಕೆ ಬಂದಿದ್ದ ಜಿಂಕೆ ಮರಿ ಮೇಲೆ ನಾಯಿಗಳು ದಾಳಿ ಮಾಡಿದ್ದವು. ತಕ್ಷಣ ನೆರವಿಗೆ ಧಾವಿಸಿದ ಗ್ರಾಮಸ್ಥರು ರಕ್ಷಿಸಿ ಆರೈಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net