

ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ಕೆರೆಯಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ, ಚರ್ಮವನ್ನು ಸಾಗಿಸಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ಬಂಧಿಸಿದ್ದು ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಗಳನ್ನು ಮೂಗೂರು ಮೋಳೆ ಗ್ರಾಮದ ರಾಜೇಂದ್ರ ಹಾಗೂ ಹಲಗೂರು ಗ್ರಾಮದ ಎಚ್.ಆರ್. ವೆಂಕಟೇಶ್ ಎಂದು ಗುರುತಿಸಲಾಗಿದೆ.
ಅಂಬಳೆ ಗ್ರಾಮದ ಕೆರೆಯಲ್ಲಿ ಜಿಂಕೆಯನ್ನು ಕಳ್ಳಬೇಟೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ತೆರಳಿದ್ದಾರೆ. ಆ ವೇಳೆ ಜಿಂಕೆಯ ಮಾಂಸ ಹಾಗೂ ಚರ್ಮವನ್ನು ಬೈಕ್‌ನಲ್ಲಿ ಚೀಲದಲ್ಲಿಟ್ಟು ಕೊಂಡೊಯ್ಯುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.