ಜಿ-೨೦: ಶೆರ್ಪಾ ಪ್ರತಿನಿಧಿಗಳಿಂದ ಯೋಗಾಭ್ಯಾಸ

IMG-20230716-WA0017
Published on

ಹೊಸಪೇಟೆ: ಹಂಪಿಯಲ್ಲಿ ಆಯೋಜಿಸಿರುವ ಜಿ-೨೦ ೩ನೇ ಶೆರ್ಪಾ ಸಭೆಯ ಕೊನೆಯ ದಿನವಾದ ಇಂದು ಪುರಂದರ ದಾಸರ ಮಂಟಪದ ಬಳಿ ನೂರಾರು ವಿದೇಶಿ ಗಣ್ಯರು ಒಟ್ಟಾಗಿ ಯೋಗ ಅಭ್ಯಾಸ ಮಾಡುವ ಮೂಲಕ ಗಮನ ಸೆಳೆದರು.

ಬೆಳಗ್ಗೆ ೬ ರಿಂದ ೭.೩೦ರ ವರೆಗೆ ಆಯುಷ್ ಇಲಾಖೆಯ ನುರಿಯ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಓಂಕಾರ, ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಗೊAಡ ಯೋಗದಲ್ಲಿ ಸರಳ ವ್ಯಾಯಾಮದೊಂದಿಗೆ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ಅರ್ಧ ಉಷ್ಟಾçಸನ, ವಜ್ರಾಸನ ಹಾಗೂ ಪದ್ಮಾಸನದಲ್ಲಿ ಪ್ರಾಣಾಯಮ ಮಾಡಿದರು. ಬಳಿಕ ಸುಖಾಸನದಲ್ಲಿ ಸುಮಾರು ೧೦ ನಿಮಿಷಗಳ ಕಾಲ ಧ್ಯಾನಕ್ಕೆ ಮೊರೆ ಹೋದರು.

ತುಂಗಭದ್ರಾ ನದಿ ತೀರದಲ್ಲಿರುವ ಹಂಪಿಯ ಐತಿಹಾಸಿಕ ಮಂಟಪದ ಮನೋಹರಮಯವಾದ ವಾತಾವರಣ ಹಾಗೂ ನದಿಯ ಜುಳು ಜುಳು ನೀರಿನ ನೀನಾದದ ಪ್ರಕೃತಿ ಸೊಬಗಿಗೆ ಜಿ-೨೦ ಪ್ರತಿನಿಧಿಗಳು ಮನಸೊರೆಗೊಂಡರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net