ಜಿ.ಪಂ ಸಿಇಓ ಕುರೇರ ಭೇಟಿ ಪರಿಶೀಲನೆ

bkt-16-1
Published on

ಬಾಗಲಕೋಟೆ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ, ವಿವಿಧ ಕಾಮಗಾರಿ, ಶಾಲೆ ಹಾಗೂ ತಾಲೂಕಾ ಆಸ್ಪತ್ರೆಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಂಜೀವಿನ ಶೇಡ್ ಪರಿಶೀಲನೆ ನಡೆಸಿ ನಂತರ ಕೋಟೆಕಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಜೀವಿನಿ ಶೆಡ್, ಗ್ರಂಥಾಲಯ, ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ, ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಹಾನಾಪೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕರ ವಸೂಲಿ, ಇ-ಹಾಜರಾತಿ ಪುಸ್ತಕ ಪರಿಶೀಲಿಸಿದರು. ಶಾಲೆಗೆ ಭೇಟಿ ನೀಡಿ ಆಟದ ಮೈದಾನ, ಶೌಚಾಲಯ ವೀಕ್ಷಿಸಿ ಹಾನಾಪೂರ ಎಸ್.ಪಿ.ತಾಂಡಾದ ಪ್ರೌಢಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಗ್ರಾಮ ಪಂಚಾಯತ ನಂದಿಕೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗೆ ನೀಡುವ ಚಿಕಿತ್ಸೆ, ಔಷಧಿ ವಿತರಣೆ ಬಗ್ಗೆ ಹಾಗೂ ಸಂಜೀವಿನಿ ಶೆಡ್ ಪರಿಶೀಲಿಸಿ ನಂತರ ಮಂಗಳೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲೆಗೆ ಭೇಟಿ ನೀಡಿ ಶಾಲಾ ಕಂಪೌಂಡ ಪರಿಶೀಲಿಸಿದರು. ಹೊಸೂರ-ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಕುರೇರ ಅವರು ಕೂಲಿಕಾರ್ಮಿಕರಿಗೆ ನೀಡುವ ಕೆಲಸದ ಪ್ರಮಾಣ, ಅವಧಿ, ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.

ಬೇಲೂರಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪ್ರೊಫೈಲ ಅಪಡೇಷನ್, ಕರ ವಸೂಲಿ, ಇ-ಹಾಜರಾತಿ ಪರಿಶೀಲಿಸಿದಿ ಬಳಿಕ ಬಾದಾಮಿಗೆ ಪ್ರಯಾಣ ಬೆಳೆಸಿ ಬಾದಾಮಿ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ ಹಾಜರಾತಿ, ರೋಗಿಗಳ ನೋಂದಣಿ ಹಾಗೂ ಔಷಧ ದಾಸ್ತಾನುಗಳನ್ನು ಪರಿಶೀಲಿಸಿದರು. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತೆ ಆಸ್ಪತ್ರೆಯ ಸಿಬ್ಬಂದಿಗೆ ಸೂಚನೆಗಳನ್ನು ನೀಡಿದರು.

ಭೇಟಿ ಸಮಯದಲ್ಲಿ ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ಸೇರಿದಂತೆ ತಾ.ಪಂ ಸಹಾಯಕ ನಿರ್ದೇಶಕರಾದ ಸತೀಶ ಮಾಗೋಂಡ, ರಾಮಚಂದ್ರ ಮೈತ್ರಿ ಸೇರಿದಂತೆ ತಾಲೂಕ ಆರೋಗ್ಯಾಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ಐ.ಇ.ಸಿ. ಸಂಯೋಜಕರು , ತಾಂತ್ರಿಕ ಸಹಾಯಕ ಅಭಿಯಂತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net