ಜಿ.ಟಿ.ದೇವೇಗೌಡ, ಪ್ರತಾಪಸಿಂಹ ಕಾಮಗಾರಿಗಳಿಗೆ ಚಾಲನೆ

28
Published on

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಹಿನಕಲ್ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಹಾಗೂ ಸಂಸದ ಪ್ರತಾಪಸಿಂಹ ಬುಧವಾರ ಚಾಲನೆ ನೀಡಿದರು.
ಹಿನಕಲ್‌ನ ಶ್ರೀನನ್ನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಒಟ್ಟು 24.69 ಕೋಟಿ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಶ್ರೀನನ್ನೇಶ್ವರ ದೇವಸ್ಥಾನದ ಹತ್ತಿರ, ಕಲ್ಯಾಣಿ, ಕೆರೆ, ಚರ್ಚ್ ರಸ್ತೆ, ತಮ್ಮಡಗೆರೆ ರಸ್ತೆ, ಶನೇಶ್ವರ ದೇವಸ್ಥಾನದ ಹತ್ತಿರ, ಕಾಳಮ್ಮನವರ ದೇವಸ್ಥಾನದ ಬಳಿ, ಹಳೆ ಗ್ರಾಮ ಪಂಚಾಯಿತಿ ಕಾರ್ಯಾಲಯ, ನಾಯಕರ ಬೀದಿ, ಪರಿಶಿಷ್ಠ ಜಾತಿಯ ಕಾಲನಿ, ಬಸವರಾಜು ಸರ್ಕಲ್ ಹತ್ತಿರ, ಹಿನಕಲ್ ಸ್ಮಶಾನ, ರಮೇಶ್ ಕೋಳಿ ಫಾರಂ ಹತ್ತಿರ, ಲಕ್ಷ್ಮೇಥಗೌಡರ ಮನೆ, ಎಫ್‌ಬ್ಲಾಕ್, ಎಸ್.ವಿ.ಅಪಾರ್ಟ್‌ಮೆಂಟ್, ನೋಟ್ರಿಡಾಂ ಸ್ಕೂಲ್, ಆದಿತ್ಯ ಬಡಾವಣೆ ರಸ್ತೆೆ ಹಾಗೂ ಸುಬ್ರಮಣ್ಯ ನಗರದಲ್ಲಿ ವಿವಿಧ ಕಾಮಗಾರಿ ಆರಂಭಿಸಲಾಯಿತು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ಮುಖಂಡರಾದ ಹಿನಕಲ್ ಎಚ್.ಸಿ.ರಾಜು, ಅಕ್ಕಿ ವೆಂಕಟೇಶ್, ಈಶ್ವರಪ್ಪ, ಬಾಬಣ್ಣ, ಜೆ.ರಮೇಶ್, ಎಸ್.ಸಿ. ಸ್ವಾಮಿ, ವೆಂಕಟೇಶ್ ನಾಯಕ, ಶಂಕರ್ ನಾಯಕ, ಮಿಲ್ ಸೋಮಣ್ಣ, ಸಿ.ಸ್ವಾಮಿ, ವಿಜಯ್ ಕುಮಾರ್, ಗುರು ಆಚಾರ್, ಚಲುವರಾಜು, ವೈಕುಂಟಚಾರಿ, ಎಚ್.ಬಿ.ವಿಜಯ್‌ಕುಮಾರ್, ಎಚ್.ಬಿ.ಜಗದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net