ಜಿ.ಎಸ್.ಮಂಜುನಾಥ್ ನಿರಾಳ

CTD 00006
Published on

ಚಿತ್ರದುರ್ಗ: ಹಿರಿಯೂರಲ್ಲಿ ಈಚೆಗೆ ಜರುಗಿದ್ದ ಸಮಾರಂಭವೊಂದರ ಕಾರ‌್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿದ್ದ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ಅವರಿಗೆ ಬುಧವಾರ ಜಾಮೀನು ದೊರಕಿದೆ. ಮಂಜುನಾಥ ಪರ ವಕೀಲ ಎಂ.ಉಮೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಗೀತಾಕುಂಬಾರ್ ಜಾಮೀನು ಮಂಜೂರು ಮಾಡಿದರು.ಅಡುಗೆ ಅನಿಲ ದರ ಇಳಿಕೆ ಕುರಿತಂತೆ ಮಂಜುನಾಥ್ ಪ್ರಧಾನಿ ವಿರುದ್ಧ ಮಾಡಿದ್ದ ಟೀಕೆ ವೈರಲ್ ಆಗಿತ್ತು. ಜಿಲ್ಲೆ ವಿವಿಧೆಡೆ ಅವರ ವಿರುದ್ಧ ಬಿಜೆಪಿ ಪ್ರಮುಖರು ಪೊಲೀಸರಿಗೆ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net