

ತರೀಕೆರೆ: ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಬಣ ಮೇಲುಗೈ ಸಾಧಿಸಿದೆ.
ಸಾಲಗಾರರ ಕ್ಷೇತ್ರದ 11 ನಿರ್ದೇಶಕ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ಸಂಘದ ಹಾಲಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಹಾಲಿ ಉಪಾಧ್ಯಕ್ಷ ಎಚ್.ಪರಶುರಾಮ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಟಿ.ನಾಗರಾಜ್, ಟಿ.ಎನ್.ಲೋಕೇಶ್, ಟಿ.ಎಂ.ರಮೇಶ್, ಟಿ.ಜಿ.ಸುರೇಶ್, ಟಿ.ವಿ.ಶ್ರೀನಿವಾಸ್, ಪುಷ್ಪಲತಾ, ಸುಮಾ ಹಾಗೂ ಅಣ್ಣಯ್ಯ ಪ್ರತಿ ಸ್ಪರ್ಧಿಗಳಿಗಿಂತ ಅಧಿಕ ಮತ ಗಳಿಸಿ ಆಯ್ಕೆಯಾದರು. ಸಾಲೇತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ ಅವಿರೋಧ ಆಯ್ಕೆಯಾದರು.