

ಕಲಬುರಗಿ: ಸ್ವಾತಂತ್ರೊö್ಯÃತ್ಸವ ನಿಮಿತ್ತ ನಗರದ ಜಿ-೯೯ ತಂಡ, ರೋಟರಿ ಕ್ಲಬ್ ಆï ಕಲಬುರಗಿ ಉತ್ತರ ವಲಯದ ಸಹಯೋಗ ಹಾಗೂ ಶಶಿಕಾಂತ ಗಿಲ್ಡಾ ಸ್ಮರಣಾರ್ಥ ಆ.೧೫ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಜಿ-೯೯ ತಂಡದ ನಿರ್ದೇಶಕ ಶರಣು ಪಪ್ಪಾ ತಿಳಿಸಿದರು.
ಸ್ವಾತಂತ್ರೊö್ಯÃತ್ಸವ ನಿಮಿತ್ತ ೧೩ ವರ್ಷದಿಂದ ನಿರಂತರ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಜೇವರ್ಗಿ ಕ್ರಾಸ್ ಸಮೀಪದ ಆರೋಗ್ಯ ಲೈï ಕೇರ್ ಆಸ್ಪತ್ರೆಯಲ್ಲಿ ಆ.೧೫ರಂದು ಬೆಳಗ್ಗೆ ೮.೩೦ಗಂಟೆಯಿAದ ಶಿಬಿರ ನಡೆಯಲಿದೆ. ಲಿಂಗರಾಜ ಅಪ್ಪ ಉದ್ಘಾಟಿಸಲಿz್ದÁರೆ. ರೋಟರಿ ಕ್ಲಬ್ ಉತ್ತರ ವಲಯದ ಅಧ್ಯP್ಷÀ ದಿನೇಶ ಪಾಟೀಲ್ ಅಧ್ಯP್ಷÀತೆ ವಹಿಸಲಿz್ದÁರೆ ಎಂದು ಹೇಳಿದರು.
ಭಯ ಹೊಗಲಾಡಿಸುವ ಕೆಲಸ: ಯುವಕರಲ್ಲಿ ರಕ್ತದಾನದ ಬಗ್ಗೆ ಆತಂಕವಿದೆ. ಅದನ್ನು ನೀಗಿಸಿ, ರಕ್ತದಾನಕ್ಕೆ ಪ್ರೇರಣೆ ನೀಡುವ ಕೆಲಸವನ್ನು ಜಿ-೯೯ ತಂಡ ಮಾಡುತ್ತಿದೆ ಎಂದು ಶರಣು ಪಪ್ಪಾ ಹೇಳಿದರು. ಹಿಂದೆ ರಕ್ತದಾನ ಶಿಬಿರ ಆರಂಭದ ದಿನಗಳಲ್ಲಿ ಒಂದೇ ದಿನ ಹೆಚ್ಚಿನ ಯುವಕರು ರಕ್ತದಾನ ಮಾಡುತ್ತಿದ್ದರು. ನಂತರ ಅಗತ್ಯವಿದ್ದಾಗ ರಕ್ತದಾನ ನೀಡಲು ಯುವಕರು ದೊರೆಯುತ್ತಿರಲಿಲ್ಲ. ಆದ್ದರಿಂದ ಪ್ರಸ್ತುತ ಮೊದಲ ಬಾರಿಗೆ ರಕ್ತದಾನ ಮಾಡಲು ಪ್ರೋತ್ಸಾಹಿಸಿ, ಭಯ ಹೋಗಲಾಡಿಸುತ್ತಿz್ದÉÃವೆ. ಮುಂದೆ ತುರ್ತು ಅವಶ್ಯಕತೆ ಇದ್ದವರು ಜಿ-೯೯ ತಂಡದ ಸದಸ್ಯರಿಗೆ ಕರೆ ಮಾಡಿದರೆ, ಸಹಾಯ ಮಾಡಲಾಗುವುದು ಎಂದರು.
ರೋಟರಿ ಕ್ಲಬ್ ಉತ್ತರ ವಲಯದ ಅಧ್ಯP್ಷÀ ದಿನೇಶ ಪಾಟೀಲ್ ಮಾತನಾಡಿ, ಯುವಕರಲ್ಲಿ ಜಾಗೃತಿ ಮೂಡಿಸಿ, ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಗುರಿಯಾಗಿದೆ. ೧೦೦ಕ್ಕಿಂತ ಹೆಚ್ಚಿನ ಯುವಕರು ರಕ್ತದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಜಯಕುಮಾರ ನಂದ್ಯಾಳ, ವಿನಾಯಕ ತಗಡಗರ, ಶಿವ ಉದನೂರು, ಸಂಪತ್ ಗಿಲ್ಡಾ ಇತರರಿದ್ದರು.