ಜಿ-20 ರಾಷ್ಟ್ರಗಳ ಗಣ್ಯರಿಗೆ ಯೋಗ ಮಾರ್ಗದರ್ಶನ

24
Published on

ಮೈಸೂರು: ಹಂಪಿಯಲ್ಲಿ ಆಯೋಜಿಸಿದ್ದ ಜಾಗತಿಕ ಜಿ-20 ರಾಷ್ಟ್ರಗಳ ಗಣ್ಯರಿಗೆ ಮೈಸೂರಿನ ಯೋಗ ಗುರು ಡಾ.ಪಿ. ಎನ್.ಗಣೇಶ್‌ಕುಮಾರ್ ಯೋಗದ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ವಿಶೇಷ ಆಹ್ವಾನದ ಮೇರೆಗೆ ಹಂಪಿಗೆ ತೆರಳಿದ್ದ ಮೈಸೂರು ತಾಲೂಕು ದೈಹಿಕ ಶಿಕ್ಷಣ ಅಧಿಕಾರಿಯೂ ಆದ ಮೈಸೂರು ಜಿಲ್ಲಾ ಯೋಗಾ ಸ್ಪೋರ್ಟ್ಸ್ ಫೌಂಡೇಷನ್ ಅಧ್ಯಕ್ಷರಾಗಿರುವ ಅವರು ತುಂಗಾ ನದಿಯ ದಡೆಯ ಪುರಂದರ ಮಂಟಪದಲ್ಲಿ ವಿವಿಧ ದೇಶಗಳಿಂದ ಆಗಮಿಸಿದ್ದ ಗಣ್ಯರಿಗೆ ಯೋಗದ ಅರ್ಥ, ಪ್ರಾಮುಖ್ಯತೆ ತಿಳಿಸಿಕೊಟ್ಟರು. ಅಲ್ಲದೆ ಆಸನ, ಪ್ರಾಣಾಯಾಮ, ಧ್ಯಾನ ಅಭ್ಯಾಸವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಯೋಗಾದಲ್ಲಿ ಎರಡು ವಿಶ್ವ ದಾಖಲೆ ಮಾಡಿರುವ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ವಿವೇಕಾನಂದ ಯೋಗ ಶಿಕ್ಷಣ ಸಂಸ್ಥೆಯ ಎ.ಸೌರಭ ವಿವಿಧ ಕ್ಲಿಷ್ಟಕರ ಆಸನಗಳ ಪ್ರದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net