ಜಾರ್ಖಂಡ್​ದ ಸಮ್ಮೇದ ಶಿಖರಜಿ ಪಾವಿತ್ರ$್ಯ ಕಾಪಾಡಿ

22-22
ಸಮ್ಮೇದ ಶಿಖರಜಿ ಪ್ರವಾಸಿ ತಾಣ ಮಾಡದಂತೆ ಬೋರಗಾಂವ ಪಟ್ಟಣದ ಜೈನ್​ ಸಮುದಾಯದವರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ರಾವಸಾಹೇಬ ಪಾಟೀಲ, ಉತ್ತಮ ಪಾಟೀಲ, ಮೀನಾ ಪಾಟೀಲ, ಅಭಯಕುಮಾರ ಮಗದುಮ್ಮ ಇದ್ದರು.
Published on

ಬೋರಗಾಂವ: ಜಾರ್ಖಂಡ್​ ರಾಜ್ಯ ಸರ್ಕಾರ ಜೆನ ಧಮೀರ್ಯರ ಸಮ್ಮೇದ ಶಿಖರಜಿ ಪವಿತ್ರ ೇತ್ರವನ್ನು ಪ್ರವಾಸಿ ತಾಣವೆಂದು ಘೋಷಣೆ ಮಾಡಿರುವುದನ್ನು ಖಂಡಿಸಿ ಬುಧವಾರ ಸಮುದಾಯದ ವತಿಯಿಂದ ಪಟ್ಟಣದ ಪ್ರತಿಭಟನೆ ಪುರಸಭೆಗೆ ಮುಖ್ಯಾಧಿಕಾರಿ ಪಿ.ಎ.ಕಲ್ಯಾಣಶೆಟ್ಟಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಾಜ್ಯ ಜೆನ್​ ಅಸೋಸಿಯೇಷನ್​ ನಿರ್ದೇಶಕ ಉತ್ತಮ ಪಾಟೀಲ ಮಾತನಾಡಿ, ಸಮ್ಮೇದ ಶಿಖರಜಿ ಪ್ರವಾಸಿ ತಾಣವಾದರೆ, ಕ್ಷೇತ್ರದ ಪಾವಿತ್ರ$್ಯ ಹಾಳಾಗಲಿದೆ. 24 ತೀರ್ಥಂಕರರ ಪೆಕಿ 20 ತೀರ್ಥಂಕರರು ಮೋ ಹೊಂದಿದ ಪವಿತ್ರ ೇತ್ರವಾಗಿದೆ. ಸರ್ಕಾರ ಕ್ಷೇತ್ರದ ಪಾವಿತ್ರ$್ಯ ಕಾಪಾಡಬೇಕೆಂದು ಆಗ್ರಹಿಸಿದರು.

ದಣ ಭಾರತ ಜೆನ ಸಭೆಯ ಅಧ್ಯ ರಾವಸಾಹೇಬ ಪಾಟೀಲ, ಮೀನಾ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ,ಪಟ್ಟಣ ಪಂಚಾಯಿತಿ ಸದಸ್ಯ ಅಭಯಕುಮಾರ ಮಗದುಮ್ಮ ಇತರರು ಇದ್ದರು.
ಕಾಗವಾಡ ವರದಿ: ಸಮ್ಮೇದ ಶಿಖರಜಿ ಪ್ರವಾಸಿ ತಾಣ ಪಟ್ಟಿದಿಂದ ಕೈಬಿಡುವಂತೆ ಒತ್ತಾಯಿಸಿ ಜೈನ ಸಮುದಾಯದವರು ಪಟ್ಟಣದಲ್ಲಿ ಬೃಹತ್​ ಪ್ರತಿಭಟನೆ ರ್ಯಾಲಿ ನಡೆಸಿ, ನಾಂದಣಿ ಜೈನ ಮಠದ ಸ್ವಸ್ತಿ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ್​ಗೆ ಬುಧವಾರ ಮನವಿ ಸಲ್ಲಿಸಿದರು.

ಜಿನಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಸಮ್ಮೇದ ಶಿಖರಜಿ ಪ್ರವಾಸಿ ತಾಣ ಮಾಡುವ ವಿಷಯದಲ್ಲಿ ಜಾರ್ಖಂಡ ಸರ್ಕಾರ ಕುಣಿಸಿದಂತೆ ಕೇಂದ್ರ ಸರ್ಕಾರ ನಡೆದುಕೊಂಡಿದ್ದು ಖಂಡನೀಯ. ಸರ್ಕಾರ ಆದೇಶ ವಾಪಸ ಪಡೆಯಬೇಕೆಂದರು.

ಸಮುದಾಯದವರು ಅಂಗಡಿ ಮುಗ್ಗಟ್ಟು, ವ್ಯಾಪಾರ ವಹಿವಾಟು ಬಂದ ಮಾಡಿ ರ್ಯಾಲಿಯಲ್ಲಿ ಪಾಲ್ಗೊಂಡರು. ಶೀತಲಗೌಡ ಪಾಟೀಲ, ಸಂಜಯ ಕುಚನೂರೆ, ಅಭಯ ಅಕಿವಾಟೆ,
ಸುರೇಶ ಚೌಗಲೆ, ಟಿ.ಕೆ.ಧೋತರೆ, ವಿಜಯಕುಮಾರ ಅಲಿವಾಟೆ, ಸುರೇಶ ಚೌಗಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net