ಜಾಮೀನಿನ ಚಿಂತೆಯಲ್ಲಿ ದರ್ಶನ್

Published on

ಬಳ್ಳಾರಿ ; ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಸೋಮವಾರ ಜಾಮೀನು ದೊರೆಯುತ್ತದೆ ಇಲ್ಲ ಎಂಬ ಚಿಂತೆಯಲ್ಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.
ಇಲ್ಲಿನ ಕೇಂದ್ರ ‌ಕಾರಾಗೃಹದಲ್ಲಿ ಕಳೆದ ಇಪ್ಪತ್ತು ಅಧಿಕ ದಿನಗಳಿಂದ ಜೈಲಿನಲ್ಲಿದ್ದಾರೆ. ಸೋಮವಾರ ‌ನ್ಯಾಯಲಯದಲ್ಲಿ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಇಂದು ಜಾಮೀನು ದೊರೆಯಲಿದೆ ಎಂಬ ಆಲೋಚನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿದವು. ಈಗಾಗಲೇ ದರ್ಶನ್ ಆರೋಗ್ಯವಾಗಿದ್ದು, ಜೈಲಿನ ನಿಯಮದಂತೆ ಸೌಲಭ್ಯ ನೀಡಲಾಗುತ್ತಿದೆ ಎಂದು ಜೈಲು ಸಿಬ್ಬಂದಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net