ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ

08arsph1ep,,,,
ಜಾವಗಲ್ ಗ್ರಾಮದ ಪಶುವೈದ್ಯಕೀಯ ಕಚೇರಿ ಆವರಣದಲ್ಲಿ ಜಾನುವಾರುಗಳಿಗೆ ರೈತರು ಲಸಿಕೆ ಹಾಕಿಸಿದರು.
Published on

ಅರಸೀಕೆರೆ: ತಾಲೂಕಿನ ಜಾವಗಲ್ ಗ್ರಾಮದಲ್ಲಿರುವ ಪಶುವೈದ್ಯಕೀಯ ಕಚೇರಿ ಆವರಣದಲ್ಲಿ ಮಂಗಳವಾರ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ಹಾಕಲಾಯಿತು.

ವೈದ್ಯಾಧಿಕಾರಿ ಡಾ.ಆನಂದ್ ಮಾತನಾಡಿ, ಜಾವಗಲ್ ಹೋಬಳಿ ವ್ಯಾಪ್ತಿಯಲ್ಲಿ 12,083 ದನಗಳು ಹಾಗೂ 155 ಎಮ್ಮೆಗಳಿವೆ. ಈಗಾಗಲೇ ಶೇ.100 ರಷ್ಟು ಗುರಿ ಮುಟ್ಟಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ಜಾನುವಾರುಗಳಿಗೆ ಡಿ.7ರವರೆಗೆ ಮೂರನೆ ಸುತ್ತಿನ ರೋಗ ನಿಯಂತ್ರಣ ಲಸಿಕೆ ಹಾಕಲಾಗುತ್ತಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಡಾ.ಬಿ.ನಾಗರಾಜು, ಗಣೇಶ್, ಶಿವಕುಮಾರ್, ಮುಖಂಡರಾದ ಸೋಮಶೇಖರ್, ಪ್ರಕಾಶ್, ರಾಮಾನಾಯ್ಕ, ಬೀರೇಗೌಡ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net