ಜಾನುವಾರುಗಳತ್ತ ಇರಲಿ ಪ್ರೀತಿ

P PURA PASHU 14 (1)
Published on

ಪರಶುರಾಮಪುರ: ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಜಾನುವಾರುಗಳ ಮೇಲೆ ಹೊಂದಿದ್ದ ಪ್ರೀತಿಯನ್ನು ಈಗಿನ ಜನ ಮುಂದುವರಿಸುವ ಮೂಲಕ ಆರ್ಥಿಕವಾಗಿ ಬಲಾಢ್ಯ ಸಾಧಿಸಬೇಕು ಎಂದು ಪಶುಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆರ್.ರಾಜಣ್ಣ ಹೇಳಿದರು.

ಪುಟ್ಲೋರಹಳ್ಳಿ, ಕೊರ‌್ಲಕುಂಟೆ, ಜುಂಜರಗುಂಟೆ, ಚೌಳೂರು, ಪರಶುರಾಮಪುರ ಸೇರಿ ಹಲವು ಹಳ್ಳಿಗಳ ಜನವಸತಿ ಪ್ರದೇಶಗಳಲ್ಲಿ ಪಶುವೈದ್ಯಕೀಯ ಇಲಾಖೆ ಶನಿವಾರ ಆಯೋಜಿಸಿದ್ದ ಜಾನುವಾರುಗಳಿಗೆ ಕಾಲುಬಾಯಿಜ್ವರದ ಲಸಿಕೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾನುವಾರುಗಳಿಂದ ಗುಣಮಟ್ಟದ ಗೊಬ್ಬರ, ಹಾಲು ಸೇರಿ ಹತ್ತು ಹಲವು ಉಪಯೊಗಗಳಿವೆ. ಆದ್ದರಿಂದ ಅವುಗಳ ರಕ್ಷಣೆಗೆ ನಮ್ಮ ಅಭಿವೃದ್ಧಿಗೆ ಸಹಕಾರ ಆಗಲಿದೆ ಎಂದರು.

ಪಶುವೈದ್ಯಕೀಯ ಸಿಬ್ಬಂದಿ ರುದ್ರಮುನಿ, ಶಾಂತಮೂರ್ತಿ, ಬಸವರಾಜು, ಉಮಾದೇವಿ, ರಾಘವೇಂದ್ರ, ರಾಹುಲ್, ಸಂತೋಷ್, ರೈತರಾದ ಲೋಕಣ್ಣ, ರಮೇಶ, ಸಣ್ಣೀರಪ್ಪ, ಮಹಾದೇವಪ್ಪ, ರಂಗಸ್ವಾಮಿ, ಲಕ್ಷ್ಮಣ, ನವೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net