ಜಾನುವಾರು ಸಾಕುವವರು ಸೃಜನಶೀಲರಾಗಲಿ

2Athanigrameen1
Published on

ಅಥಣಿ ಗ್ರಾಮೀಣ: ಜಾನುವಾರು ಸಾಕುವವರು ಸೃಜನಶೀಲರಾಗಿರಬೇಕು ಎಂದು ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ವೈ.ಬಿ. ರಾಜೇಶ್ವರಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿರುವ ಅಥಣಿ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಐಎಸ್‌ಎಪಿಎಂ ಸಂಸ್ಥಾಪನಾ ದಿನ ಪ್ರಯುಕ್ತ ಜಾನುವಾರು ಉತ್ಪಾದನೆ, ನಿರ್ವಹಣೆ ವಿಭಾಗ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಜಾನುವಾರು ಆಹಾರ ಮತ್ತು ಆರೋಗ್ಯ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಬೇಸಾಯ ಪದ್ಧತಿಯಲ್ಲಿ ವಿಭಿನ್ನ ಮತ್ತು ವೈಶಿಷ್ಟ್ಯ ರೂಪಿಸಿಕೊಂಡು ಪರ್ಯಾಯಗಳ ಕುರಿತು ಆಲೋಚನೆ ಮಾಡಬೇಕು. ಹೈನುಗಾರಿಕೆಯನ್ನು ಲಾಭದಾಯಕ ಮಾಡುವ ಮತ್ತು ಬರಗಾಲದ ಸಂದರ್ಭದಲ್ಲಿ ಪರ್ಯಾಯ ಬೆಳೆ ಹಾಗೂ ಪಶು ಮೇವು ಬೇಸಾಯ ಕುರಿತು ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯದ ಡಾ. ಗುರುಪ್ರಸಾದ ಮಾತನಾಡಿದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಅಥಣಿ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ವಿಜಯಕುಮಾರ ಶೆಟ್ಟರ್, ರೈತ ರಮೇಶ ಐಗಳಿ, ಉಪನ್ಯಾಸಕರಾದ ಡಾ. ಚೇರಿ ಮಿರಾಂಡ್, ಡಾ. ಎಸ್.ವೈ.ಮುಕರ್ತಾಳ, ಡಾ.ಸುಶಾಂತ ಹಂಡಗೆ, ಡಾ. ಭರತ ಭೂಶಾನ, ಡಾ. ಪರಮೇಶ, ಡಾ. ಅಪರ್ಣಾ, ಡಾ. ಶ್ವೇತಾ, ಡಾ.ಶಿವನಗೌಡ, ಡಾ.ರಾಘವೇಂದ್ರ, ಮಾಧವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net