ಜಾನುವಾರು ಅಕ್ರಮ ಸಾಗಾಟಗಾರರ ಬಂಧನ

03 YLP 02
Published on

ಯಲ್ಲಾಪುರ: ಅಕ್ರಮವಾಗಿ ಮಿನಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ 6 ಜಾನುವಾರುಗಳನ್ನು ಮಂಗಳವಾರ ಪಟ್ಟಣದ ಜೋಡುಕೆರೆ ಬಳಿ ರಾಷಿಅೕಯ ಹೆದ್ದಾರಿ 63 ರಲ್ಲಿ ಪೊಲೀಸರು ರಕ್ಷಿಸಿದ್ದು, 3 ಜನರನ್ನು ಬಂಧಿಸಿದ್ದಾರೆ.

ಹರಿಯಾಣದ ಬಿವಾಣಿಯ ಮನಪೂಲ್​ಸಿಂಗ್ ಜಗನ್ನಾಥ, ಈಶ್ವರ ಸಿಂಗ್ ವಿಜಯ ಸಿಂಗ್ ಹಾಗೂ ಕೇರಳದ ರಿಜಿ ಫಿಲಿಪ್ ಬಂಧಿತರು. ಹರಿಯಾಣದಿಂದ ಕೇರಳದ ಕಡೆಗೆ ಮಿನಿ ಲಾರಿಯಲ್ಲಿ 5 ಎಮ್ಮೆ ಹಾಗೂ ಒಂದು ಹಸುವನ್ನು ಸಾಗಿಸುತ್ತಿರುವಾಗ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ಲಾರಿಯನ್ನು ತಡೆದು ತಪಾಸಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net