ಜಾನಪದ ಹಾಡುಗಳು ಸಿರಿ ಸಾಹಿತ್ಯ

22BK2
Published on

ಬಸವಕಲ್ಯಾಣ: ಭಾರತ ದೇಶದಲ್ಲಿಯೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಜಾನಪದ ಹಾಡುಗಳು ಹಳ್ಳಿಯ ಸಾಮಾನ್ಯ ಜನರ ಮಧ್ಯೆ ಹುಟ್ಟಿದ ಸಿರಿ ಸಾಹಿತ್ಯ ಎಂದು ಡಾ.ರಾಚಯ್ಯ ಮಠಪತಿ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಹಾಗೂ ಪುಣ್ಯಕೋಟಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ವಿಶ್ವ ಜಾನಪದ ದಿನಾಚರಣೆ ನಿಮಿತ್ತ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಪದ ಸಾಹಿತ್ಯದ ಹಾಡುಗಳು, ನೃತ್ಯ ಮುಂತಾದವುಗಳನ್ನು ಶಿಕ್ಷಣದಲ್ಲಿ ಅಳವಡಿಸಿ ಮಕ್ಕಳಲ್ಲಿ ಮೌಲ್ಯ ಬೆಳೆಸುವ ಜತೆಗೆ ನಮ್ಮ ಪುರಾತನ ಜಾನಪದ ಸಂಸ್ಕೃತಿ ಜೀವಂತ ಇಡಬೇಕಾಗಿದೆ ಎಂದರು.
ಪ್ರಾಚಾರ್ಯ ಪ್ರೊ. ಸೂರ್ಯಕಾಂತ ಶೀಲವಂತ ಮಾತನಾಡಿ, ಸಮಾಜ ಬದಲಾದಂತೆ ತಂತ್ರಜ್ಞಾನ ಬದಲಾಗುತ್ತಿದೆ. ತಂತ್ರಜ್ಞಾನ ಬೆಳೆದಂತೆ ಮನುಷ್ಯನಿಗೆ ನೆಮ್ಮದಿ ಇಲ್ಲದಂತಾಗಿ ಸಹನೆ ಕಳೆದುಕೊಳ್ಳುತ್ತಿದ್ದಾನೆ. ಮಾನವನಲ್ಲಿ ಸಹನೆ ಮತ್ತು ತಾಳ್ಮೆ ಗುಣಗಳನ್ನು ಬೆಳೆಸುವ ಶಕ್ತಿ ಜಾನಪದ ಸಾಹಿತ್ಯದಲ್ಲಿದೆ ಎಂದು ಪ್ರತಿಪಾದಿಸಿದರು.
ಪರಿಷತ್ ಅಧ್ಯಕ್ಷ ಡಾ.ಬಸವರಾಜ ಸ್ವಾಮಿ ಮಾತನಾಡಿ, ಹಳ್ಳಿಗಳಲ್ಲಿ ಜನರು ತಮ್ಮ ದು:ಖ ದುಮ್ಮಾನ ಮರೆಯಲು, ಸಂತೋAಷ ಹಂಚಿಕೊಳ್ಳಲು ಹುಟ್ಟಿದಂತಹ ಹಾಡುಗಳೇ ಜನಪದ ಸಾಹಿತ್ಯ. ಜಾನಪದ ಸಾಹಿತ್ಯ ಜನರಲ್ಲಿ ಮೌಲ್ಯಗಳ ಜತೆಗೆ ಆರೋಗ್ಯ ವೃದ್ಧಿಸುತ್ತಿತ್ತು ಎಂದು ತಿಳಿಸಿದರು.
ವಿದ್ಯಾರ್ಥಿನಿ ಲಕ್ಷ್ಮೀ ಸ್ವಾಗತಿಸಿದರೆ ಸಾನಿಯಾ ವಂದಿಸಿದರು. ಮಾಡಿದರು. ಉಪನ್ಯಾಸಕಿ ಸಪ್ನಾ ಮರಬಗೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net