ಜಾನಪದ ಸೊಗಡು ಉಳಿಸಿ ಬೆಳೆಸಿ

24raju8
ಚಾಮರಾಜನಗರದಲ್ಲಿ ಚೇತನ ಕಲಾ ವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಜನಪದ ವಿದ್ವಾಂಸ ಪಿ.ಕೆ.ರಾಜಶೇಖರ್ ಉದ್ಘಾಟಿಸಿದರು. ಜಿ.ನಿಜಗುಣರಾಜು, ಮಂಜುನಾಥ್ ಪ್ರಸನ್ನ, ಗುರುಲಿಂಗಯ್ಯ, ಲತಾ ಪುಟ್ಟಸ್ವಾಮಿ ಇತರರು ಇದ್ದರು.
Published on

ಚಾಮರಾಜನಗರ: ಗ್ರಾಮೀಣ ಹಾಗೂ ಬುಡಕಟ್ಟು ಭಾಗಗಳಲ್ಲಿ ಜಾನಪದ ಸೊಗಡು ಜೀವಂತವಾಗಿದ್ದು, ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಾನಪದ ವಿದ್ವಾಂಸ ಪಿ.ಕೆ.ರಾಜಶೇಖರ್ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಚೇತನ ಕಲಾ ವಾಹಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಬುಡಕಟ್ಟು ಜನರಲ್ಲಿ ಶುದ್ಧ ಜಾನಪದ, ಸಂಸ್ಕೃತಿ, ಜಾನಪದ ಗೀತೆಗಳು, ಆಟ-ಪದಗಳು ಹಾಸುಹೊಕ್ಕಾಗಿವೆ. ಚಾಮರಾಜನಗರ ಮೂಲತಃ ಜಾನಪದ ತವರು. ಈ ಭೂಮಿಯಲ್ಲೇ ಜಾನಪದ ಹಾಸುಹೊಕ್ಕಾಗಿದೆ. ಪಟ್ಟಣ ಪ್ರದೇಶದ ವಿದ್ಯಾವಂತರು ಸ್ಮರಣ ಶಕ್ತಿಗಿಂತ ಗ್ರಾಮೀಣ ಭಾಗದ ಜಾನಪದ ಹಾಡುಗಾರರ ಸ್ಮರಣ ಶಕ್ತಿಯು ಹೆಚ್ಚಿದ್ದು, ಜಾನಪದ ಕಲೆಯು ಉಳಿದಿರುವುದೇ ಗ್ರಾಮೀಣ ಭಾಗದ ಜಾನಪದ ಹಾಡುಗಾರರಿಂದ ಮಾತ್ರ ಎಂದರು.

ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು ಮಾತನಾಡಿ, ರಾಜ್ಯದ ಯಾವುದೇ ಗಡಿ ಭಾಗಗಳಗೆ ಹೋದರೂ ಚಾಮರಾಜನಗರ ಗಡಿ ಭಾಗದಲ್ಲಿರುವಷ್ಟು ಜಾನಪದ ಸೊಬಗು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಚಾಮರಾಜನಗರ ಜಿಲ್ಲೆ ಪವಾಡ ಪುಣ್ಯ ಪುರುಷರ ನೆಲೆಬೀಡಾಗಿದ್ದು, ಜಾನಪದ ಸಂಸ್ಕೃತಿ ಇಲ್ಲಿನ ಮೆರಗು ಎಂದ ಅವರು, ಜಿಲ್ಲೆಯಲ್ಲಿ ಜಾನಪದ ವಿವಿ ಪ್ರಾರಂಭಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ಹೆಜ್ಜೆ ಇಡಲಿದೆ ಎಂದರು.

ಪಶುಸಂಗೋಪನೆ ಸೇವೆಗಾಗಿ ಡಾ.ಸುಗಂಧರಾಜು, ಸಮಾಜ ಸೇವೆಗಾಗಿ ಜಿ.ಅಂಕಶೆಟ್ಟಿ, ಶಿಕ್ಷಕರಾದ ಡಾ.ಪ್ರಭುಸ್ವಾಮಿ, ಡಾ.ಆನಂದ್, ಎ.ಎನ್.ನಾಗೇಂದ್ರ, ಕಲಾವಿದ ದೊರೆಸ್ವಾಮಿ, ಡಾ.ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ರೋಟರಿ ಸಂಸ್ಥೆ ಅಧ್ಯಕ್ಷ ಮಹದೇವಸ್ವಾಮಿ, ಚೇತನಾ ಕಲಾ ವಾಹಿನಿ ಅಧ್ಯಕ್ಷ ರಾಜಪ್ಪ, ಕಾರ್ಯದರ್ಶಿ ಎಂ.ಮಂಜುನಾಥ್, ಲತಾ ಪುಟ್ಟಸ್ವಾಮಿ, ಜಾನಪದ ಕಲಾವಿದ ನಿಂಗಶೆಟ್ಟಿ, ಶಿವಕುಮಾರ್, ಗೌರಿಶಂಕರ್, ಗವಿ ಗುರುಸಿದ್ದಪ್ಪ, ಶಿವಮಲ್ಲೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net