ಜಾನಪದ ಸಾಹಿತ್ಯದ ಉದಾಸೀನ ಸಲ್ಲ

18 RON 1
Published on

ರೋಣ: ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಸಾಹಿತ್ಯ ಜೀವನಕ್ಕೆ ಚೈತನ್ಯ ನೀಡಲಿದ್ದು, ಎಂದಿಗೂ ಉದಾಸೀನ ಮಾಡಬಾರದು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚೂರ ಹೇಳಿದರು.

ಪಟ್ಟಣದ ಶಾರದಾ ಬಾಲಕಿಯರ ಪ್ರೌಢ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಹಿರಿಯ ಜಾನಪದ ಕಲಾವಿದರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಕಲೆ ಕನ್ನಡ ಸಂಸ್ಕೃತಿಯ ದೊಡ್ಡ ಸಾಗರವಿದ್ದಂತೆ. ಇದನ್ನು ನಮ್ಮ ಮುಂದಿನ ಯುವ ಪೀಳಿಗೆಗೆ ಕಲಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ ಎಸ್. ಬಾಲಾಜಿ ಮಾತನಾಡಿ, ಸಿನಿಮಾ, ಟಿವಿ. ಮೊಬೈಲ್​ಫೋನ್​ಗಳಿಂದ ಜಾನಪದ ಸಂಸ್ಕೃತಿ ಉಳಿಸುವುದು ಕಷ್ಟವಾಗುತ್ತಿದೆ. ಆದರೆ, ನೆಮ್ಮದಿಯ ಬದುಕಿಗೆ ಜಾನಪದ ಕಲೆ ಅವಶ್ಯ ಎಂದರು.

ಹಿರಿಯ ಜಾನಪದ ಕಲಾವಿದರಾದ ವಜೀರಬಾಬು ನದಾಫ್, ಸಂಕನಗೌಡ ಪಾಟೀಲ, ಹನುಮಪ್ಪ ರಂಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಗುಲಗಂಜಿ ಮಠದ ಗುರುಪಾದೇಶ್ವರ ಶ್ರೀಗಳು, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಈಶ್ವರಪ್ಪ ರೇವಡಿ, ರವೀಂದ್ರ ದೊಡ್ಡಮೇಟಿಪ್ರೊ. ಕೆ.ಎಸ್. ಕೌಜಲಗಿ, ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net