ಜಾನಪದ ಸಾಹಿತ್ಯಕ್ಕೆ ಜಿಲ್ಲೆ ಕೊಡುಗೆ ಅಪಾರ

2kgl photo7
Published on
  • ಕೊಳ್ಳೇಗಾಲ : ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಶ್ರೀ ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಇತ್ತೀಚೆಗೆ ಅಮೃತ ವರ್ಷ ಬೆಳ್ಳಿಯ ಸ್ಪರ್ಶ, ಸಾಹಿತ್ಯದ ನಡಿಗೆ ಶಾಲಾ, ಕಾಲೇಜುಗಳಿಗೆ ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.
    ಸಾಹಿತಿ ಶಂಕನಪುರ ಮಹಾದೇವ ಮಾತನಾಡಿ, ವಿಶ್ವದ ಸಾಹಿತ್ಯಕ್ಕೆ ಕನ್ನಡದ ಕೊಡುಗೆ ಅಪಾರವಾದದು. ವಿಶೇಷವಾಗಿ ಜಿಲ್ಲೆಯ ಜಾನಪದ ಸಾಹಿತ್ಯಕ್ಕೆ ಮಲೆ ಮಹದೇಶ್ವರ ಹಾಗೂ ಶ್ರೀ ಮಂಟೇಸ್ವಾಮಿ ಮಹಾಕಾವ್ಯಗಳನ್ನು ಕೊಡುವ ಮೂಲಕ ದೊಡ್ಡ ಕಾಣಿಕೆಯನ್ನೇ ನೀಡಿದೆ ಎಂದು ಹೇಳಿದರು.
    ಕನ್ನಡ ಉಳಿಸಿ, ಬೆಳೆಸುವುದರಲ್ಲಿ ಗ್ರಾಮೀಣ ಜನರು ಹಾಗೂ ಜಾನಪದರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಾದೇಶಿಕ ಕನ್ನಡ ಭಾಷೆ ಶೈಲಿಯಲ್ಲೇ ಕಥೆ, ಪ್ರಬಂಧ, ಚರ್ಚಾಗೋಷ್ಠಿ, ಲೇಖನಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಬೇಕು. ಈ ಮೂಲಕ ಕನ್ನಡ ಕಟ್ಟುವ, ಉಳಿಸುವ ಕೆಲಸವನ್ನು ಮಕ್ಕಳಿಂದ ಮಾಡಿಸಬೇಕು ಎಂದು ಸಲಹೆ ನೀಡಿದರು.
    ಪ್ರಸ್ತುತ ಗಡಿ ಮತ್ತು ಭಾಷೆಗೆ ಧಕ್ಕೆ ತರುವ ಪರಿಸ್ಥಿತಿ ಇದೆ. ಅದಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದವೇ ಉದಾಹರಣೆಯಾಗಿದೆ. ಆದರೆ ಕನ್ನಡಿರು ಭಾಷಾ ಸೌಹಾರ್ದ ಮತ್ತು ಪ್ರಾದೇಶಿಕ ಸಹಬಾಳ್ವೆಯನ್ನು ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದೇವೆ ಎಂದು ತಿಳಿಸಿದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ, ಮುಖ್ಯ ಶಿಕ್ಷಕಿ ವಸುಂಧರಾ, ಸಹಶಿಕ್ಷಕರಾದ ಚಂದ್ರಕಲಾ ಜೋಸೆಫ್, ರವಿ, ಶಾಂತರಾಜು, ಎಂ.ಚಿಕ್ಕರಾಜು, ಮಹಾಂತಯ್ಯ, ವೆಂಕಟೇಶ್, ವನಿತಾ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net