ಜಾನಪದ ಸಾಹಿತ್ಯ ಪೋಷಿಸೋಣ

26Athni1
Published on

ಅಥಣಿ: ಜನಪದ ಹಾಡುಗಳು ಬಾಯಿಂದ ಬಾಯಿಗೆ ಬಂದ ಸಾಹಿತ್ಯವಾಗಿದ್ದು ನಾಡಿನ ಹೆಮ್ಮೆಯ ಸಂಗತಿ ಎಂದು ಬೆಳಗಲಿಯ ಉಪನ್ಯಾಸಕ ಶ್ರೀಕಾಂತ ಕೆಂಧೋಳಿ ಹೇಳಿದರು.

ತಾಲೂಕಿನ ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪದರು ಓದು-ಬರಹ ಬಾರದಿದ್ದರು ಗಣಿತವನ್ನು ಸುಲಲಿತವಾಗಿ ಹೇಳುತ್ತ, ಬದುಕಿನ ಘಟನೆಗಳನ್ನು ಹಾಡಿನ ಮೂಲಕ ತಿಳಿಸುತ್ತಿದ್ದರು. ದಿನನಿತ್ಯದ ಬದುಕಿನಲ್ಲಿರುವ ಜಾನಪದವನ್ನು ಗೌರವಿಸಿ ಮುಂದಿನ ಪೀಳಿಗೆಗೆ ನೀಡಬೇಕು ಎಂದು ತಿಳಿಸಿದರು.

ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಜನಪದರ ಬದುಕು ಹಾಡು, ಒಡಪು, ಒಗಟು, ಗಾದೆಗಳಿಂದ ಕೂಡಿದೆ. ಜಾನಪದ ಸಾಹಿತ್ಯಕ್ಕೆ ಕೊನೆ ಇಲ್ಲ ಅದನ್ನು ಉಳಿಸಿ ಬೆಳಸಬೇಕು ಎಂದರು.

ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದರು. ಆಡಳಿತ ಮಂಡಳಿಯ ಸದಸ್ಯರಾದ ಪ್ರಕಾಶ ಪಾಟೀಲ, ಆಶೋಕ ಬುರ್ಲಿ, ಪ್ರಾಚಾರ್ಯ ಡಾ.ಬಿ.ಎಸ್.ಕಾಂಬಳೆ, ಡಾ.ಭಾರತಿ.ಎಸ್.ಗದ್ದಿ, ಶಂಭು ನೀರಲಗಿ, ಡಾ.ಪ್ರಶಾಂತ ಮಗದುಮ್, ಚೇತನ ಧರಿಗೌಡರ, ಮಹಾದೆವಿ ಜಕ್ಕಪನವರ, ಸಾವಿತ್ರಿ ಯಲ್ಲಟ್ಟಿ, ದಿವ್ಯಾ ಶೇಗುಣಸಿ, ಭಾಗ್ಯಶ್ರೀ ಲೋಕುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net