ಜಾನಪದ ಸಾಹಿತ್ಯ ನಮ್ಮೆಲ್ಲರ ಉಸಿರು

Folk literature is the breath of all of us
ವಿಜಯಪುರದ ಸಾಯಿಪಾರ್ಕ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಡಿವಾಳಪ್ಪ ತುಳಜಪ್ಪ ಸಾಸನೂರ ದತ್ತಿ ಕಾರ್ಯಕ್ರಮವನ್ನು ಜಾನಪದ ವಿದ್ವಾಂಸ ಶಿವಾನಂದ ಮಂಗಾನವರ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಉಪನ್ಯಾಸಕ ಅಮರೇಶ ಸಾಲಕ್ಕಿ, ಶಿಕ್ಷಕಿ ಇಂದಿರಾ ಬಿದರಿ, ನಿಲಯ ಮೇಲ್ವಿಚಾರಕ ಸದಾನಂದ ಬಡಿಗೇರ ಇತರರಿದ್ದರು.
Published on

ವಿಜಯಪುರ: ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನಮ್ಮೆಲ್ಲರ ಉಸಿರಾಗಿದೆ ಎಂದು ಜಾನಪದ ವಿದ್ವಾಂಸ ಶಿವಾನಂದ ಮಂಗಾನವರ ಹೇಳಿದರು.

ನಗರದ ಸಾಯಿಪಾರ್ಕ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್, ವಿಜಯಪುರ ಆಶ್ರಯದಲ್ಲಿ ಶನಿವಾರ ನಡೆದ ಶ್ರೀ ಮಡಿವಾಳಪ್ಪ ತುಳಜಪ್ಪ ಸಾಸನೂರ ದತ್ತಿಯಲ್ಲಿ ಜಾನಪದ ಸಾಹಿತ್ಯ ಕುರಿತು ಹಾಗೂ ಜಚನಿ ಕೃತಿಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದತ್ತಿನಿಧಿ ಗೋಷ್ಠಿಗಳಲ್ಲಿ ಹಲವು ವಿಷಯಗಳನ್ನು ಚರ್ಚಿಸುವುದರಿಂದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪೂರಕವಾಗಿದೆ ಎಂದರು.

ದತ್ತಿ ಉಪನ್ಯಾಸಕ ಅಮರೇಶ ಸಾಲಕ್ಕಿ ಮಾತನಾಡಿ, ಜಾನಪದ ಕಲೆಯ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ. ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಹಲಗೆ ವಾದನ ಇಂದಿಗೂ ತಮ್ಮ ಮೌಲ್ಯ ಕಾಪಾಡಿಕೊಂಡಿವೆ ಎಂದರು.

ನಿಲಯ ಮೇಲ್ವಿಚಾರಕ ಸದಾನಂದ ಬಡಿಗೇರ, ಅಧ್ಯಕ್ಷತೆ ವಹಿಸಿದ್ದ ಶಿಕ್ಷಕಿ ಇಂದಿರಾ ಬಿದರಿ ಮಾತನಾಡಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಜಿಲ್ಲಾ ದತ್ತಿ ಕಸಾಪ ಸಂಚಾಲಕ ರಾಜೇಸಾಬ ಶಿವನಗುತ್ತಿ, ಜಿ.ಬಿ. ಅಂಗಡಿ, ಜಿ.ಎಸ್. ಬಳ್ಳೂರ, ಎಸ್.ಎಲ್. ನಾಟಿಕಾರ ವೇದಿಕೆ ಮೇಲಿದ್ದರು. ಸಾಯಿಬಣ್ಣಾ ಮಾದರ ನಿರೂಪಿಸಿದರು. ಕುಮಾರ ಕಾಂಬಳೆ ವಂದಿಸಿದರು. ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net