ಜಾನಪದ ಸಾಹಿತ್ಯ ಉಳಿಸಿ

5
Published on

ಗೋಕಾಕ: ಜಾನಪದ, ಒಕ್ಕಲುತನ ಹಾಗೂ ಸಂಸತಿಯನ್ನು ಜಗತ್ತಿನಲ್ಲೇ ಈ ಭೂಮಿಯಲ್ಲಿ ಮೊಟ್ಟ ಮೊದಲು ತಂದವರು ಹೆಣ್ಣು ಮಕ್ಕಳು ಎಂದು ಜನಪದ ವಿದ್ವಾಂಸ ಡಾ.ಸಿ.ಕೆ. ನಾವಲಗಿ ಹೇಳಿದರು.

ನಗರದ ಸಿದ್ಧಾರ್ಥ ಚಿತ್ರ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್​ ಜಿಲ್ಲಾ ಸಮಿತಿ, ಕನ್ನಡ ಜಾನಪದ ಪರಿಷತ್​ ಜಿಲ್ಲಾ ಸಮಿತಿ ಬೆಳಗಾವಿ, ಬಿಂದು ಸಂಸ್ಥೆ ಗೋಕಾಕ ಹಾಗೂ ಶ್ರೀ ಸರ್ವೇಶ್ವರ ಪ್ರಸಾದೀತ ಶಿವಕಾಳಿಕಾಂಬಾ ಸಾಂಸತಿಕ ಸಂಸ್ಥೆ ಬೆಟಗೇರಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಜನಪದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜಾನಪದ ಸಾಹಿತ್ಯ ಹಾಗೂ ಸಂಸತಿಯನ್ನು ಉಳಿಸಿ, ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಕಷಿ ಚಟುವಟಿಕೆಗಳನ್ನು ಪ್ರಾರಂಭಿಸಿದವರೇ ಮಹಿಳೆಯರು. ತಾಲೂಕಿನ ಕೌಜಲಗಿ ನಿಂಗಮ್ಮ ಮೊಟ್ಟ ಮೊದಲ ರಂಗಭೂಮಿ ಕಲಾವಿದೆಯಾಗಿದ್ದಾರೆ. ಸಾಾತ್​ ಸರಸ್ವತಿ ರೂಪಗಳಾದ ಮಹಿಳೆಯರು ಜನಪದ ಕಲೆ ಉಳಿಸಿ ಬೆಳೆಸುವಂತೆ ಕರೆ ನೀಡಿದರು.

ಜನಪದ ಮತ್ತು ಸಂಸತಿ ಕುರಿತು ಸಾಹಿತಿ ಜಯಾನಂದ ಮಾದರ ಅವರಿಂದ ಉಪನ್ಯಾಸ, ಕಲಾವಿದರಿಂದ ಸಾಂಪ್ರದಾಯಿಕ ಹಾಡುಗಳು, ರಂಗ ಗೀತೆಗಳನ್ನು ಹಾಡಲಾಯಿತು. ಕನ್ನಡ ಜನಪದ ಪರಿಷತ್​ ಜಿಲ್ಲಾಧ್ಯ ಮೋಹನ ಗುಂಡ್ಲೂರಾ, ತಾಲೂಕು ಅಧ್ಯರಾದ
ಸುಭಾಷ ನಾಯಿಕ, ಚಂದ್ರಶೇಖರ ಕೊಪ್ಪದ, ಕಲಾವಿದ ಈಶ್ವರಚಂದ್ರ ಬೆಟಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net