

ಬೀದರ್: ಎರಡನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಜಾನಪದ ಕಲಾವಿದೆ, ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯ ಮೂರ್ತಿ ಅವರನ್ನು ಬುಧವಾರ ಗೌರವಿಸಿ, ಅಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಹಾಗೂ ಕರ್ನಾಟಕ ಸಾಹಿತ್ಯ ಸಂಘದಿಂದ ಫೆ. 7ಮತ್ತು 8 ರಂದು ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಸಮ್ಮೇಳನ ನಡೆಯಲಿದೆ. ಪರಿಷತ್ ಕಲ್ಯಾಣ ಕರ್ನಾಟಕ ಸಂಯೋಜಕ ಡಾ. ಜಗನ್ನಾಥ ಹೆಬ್ಬಾಳೆ ನೇತೃತ್ವದ ನಿಯೋಗವು ರಾಣಿ ಅವರ ಮನೆಗೆ ತೆರಳಿ ಸಮ್ಮೇಳನದ ವೀಳ್ಯ ನೀಡಿತು.
ಈ ವೇಳೆ ಡಾ.ಹೆಬ್ಬಾಳೆ ಮಾತನಾಡಿ, ರಾಣಿ ಅವರು ಅತ್ಯಂತ ಶ್ರಮಪಟ್ಟು ನಾಟ್ಯ ಸಾಧನೆ ಮಾಡಿದ್ದಾರೆ. ಹಲವಾರು ಪ್ರಶಸ್ತಿ, ಗೌರವಕ್ಕೆ ಭಾಜನರಾಗಿದ್ದಾರೆ. ಎಲ್ಲೆಡೆ ನೃತ್ಯ ಪ್ರದರ್ಶನ ನೀಡುವ ಜತೆಗೆ ಸಾವಿರಾರು ಮಕ್ಕಳಿಗೆ ಭರತನಾಟ್ಯ ತರಬೇತಿ ಸಹ ನೀಡಿದ್ದಾರೆ. ಅವರ ಕಲೆ ಮತ್ತು ಸಾಧನೆ ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಪ್ರೊ. ಎಸ್.ಬಿ.ಬಿರಾದಾರ, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ನಿಜಲಿಂಗಪ್ಪ ತಗಾರೆ, ಕೆ. ಸತ್ಯ ಮೂರ್ತಿ, ಎಸ್.ಬಿ.ಕುಚಬಾಳ, ಮಲ್ಲಮ್ಮ ಸಂತಾಜಿ, ಡಾ. ರಾಜಕುಮಾರ ಹೆಬ್ಬಾಳೆ, ಡಾ. ಮಹಾನಂದಾ ಮಡಕಿ, ಮಹಾರುದ್ರ ಡಾಕುಳಗಿ, ಡಾ.ಸುನೀತಾ ಕೂಡ್ಲಿಕರ್, ಬಸವರಾಜ ಹೆಗ್ಗೆ, ಪ್ರಕಾಶ ಕನ್ನಾಳೆ, ಶ್ರೀಕಾಂತ ಪಾಟೀಲ್ ಇತರರಿದ್ದರು.