ಜಾನಪದ ಸಮ್ಮೇಳನಕ್ಕೆ ರಾಣಿ ಸರ್ವಾಧ್ಯಕ್ಷೆ

Rani Satyamurthy
Published on

ಬೀದರ್: ಫೆ.7, 8ರಂದು ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಹಮ್ಮಿಕೊಂಡಿರುವ ಜಿಲ್ಲಾ ದ್ವಿತೀಯ ಜಾನಪದ ಸಮ್ಮೇಳನ ಸರ್ವಾಧ್ಯಕ್ಷರಾಗಿ ಜಾನಪದ ಕಲಾವಿದೆ, ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ನ ಕಲ್ಯಾಣ ಕರ್ನಾಟಕ ಸಂಯೋಜಕ ಡಾ.ಜಗನ್ನಾಥ ಹೆಬ್ಬಾಳೆ ತಿಳಿಸಿದ್ದಾರೆ.

ರಾಣಿ ಸತ್ಯ ಮೂರ್ತಿ 2003ರಲ್ಲಿ ನಗರದಲ್ಲಿ ನಾಟ್ಯಶ್ರೀ ನೃತ್ಯಾಲಯ ಆರಂಭಿಸಿ ಸಾವಿರಾರು ಭರತನಾಟ್ಯ ಕಲಾವಿದರನ್ನು ಕಲಾರಂಗಕ್ಕೆ ಅರ್ಪಿಸುತ್ತಿದ್ದಾರೆ. 17 ವರ್ಷಗಳಿಂದ 3000ಕ್ಕೂ ಹೆಚ್ಚು ಮಕ್ಕಳಿಗೆ ನೃತ್ಯ ತರಬೇತಿ ನೀಡಿ ಕಲಾವಿದರನ್ನಾಗಿ ರೂಪಿಸಿ, ರಾಜ್ಯದ ಬಹುತೇಕ ಜಿಲ್ಲೆ ಸೇರಿ ಹೊರರಾಜ್ಯದಲ್ಲೂ ಭರತನಾಟ್ಯ ಮತ್ತು ಜಾನಪದ ನೃತ್ಯ ಪ್ರದರ್ಶನ ನೀಡಿದ್ದಾರೆ.

ಇವರ ಪ್ರತಿಭೆಗೆ ನೃತ್ಯ ಕಲಾರತ್ನ, ಜನಸಿರಿ, ನೃತ್ಯ ಕುಸುಮ, ಶ್ರೀ ಚೆನ್ನರತ್ನ, ಬಸವ ಕಲಾರತ್ನ, ನೃತ್ಯ ಸೇವಾರತ್ನ ಸೇರಿ ಹಲವಾರು ಪ್ರಶಸ್ತಿಗಳು ಬಂದಿವೆ. ಕಲಾವಿದರನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ರಾಣಿ ಸತ್ಯ ಮೂರ್ತಿ ಅವರು ಮಹಾಲಕ್ಷ್ಮೀ ಕಂಗೀನಾಯ ಹೆಸರಲ್ಲಿ 5000 ರೂ. ನಗದು ಮೊತ್ತದ ನಾಟ್ಯಶ್ರೀ ಪ್ರಶಸ್ತಿ ಆರಂಭಿಸಿದ್ದಾರೆ. ಇವರ ಕಲಾ ಸೇವೆ ಗುರುತಿಸಿ ಸಮ್ಮೇಳನ ಸರ್ವಾಧ್ಯಕ್ಷತೆ ಗೌರವ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net