ಜಾನಪದ ಸಮೂಹ ಗೀತೆಗಳ ಸ್ಪರ್ಧೆ 26ರಂದು

folk music
Published on

ಹುಬ್ಬಳ್ಳಿ: ನಗರದ ಸುನಿಧಿ ಕಲಾ ಸಂಸ್ಥೆ ಹಾಗೂ ಅನಂತ ಪ್ರೇರಣಾ ಕೇಂದ್ರ ಸಂಯುಕ್ತವಾಗಿ ಮಹಿಳೆಯರಿಗಾಗಿ ಪದ ಹಾಡೂಣು ಬಾ-ಜಾನಪದ ಸಮೂಹ ಗೀತೆಗಳ ಸ್ಪರ್ಧೆ ಆಯೋಜಿಸಿದೆ.

ಆ. 26ರಂದು ಬೆಳಗ್ಗೆ 11.30ಕ್ಕೆ ವಿಜಯನಗರದ ಎಸ್.ಆರ್. ಕೆಂಪಣ್ಣವರ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಅನಂತ ಪ್ರೇರಣಾ ಕೇಂದ್ರದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು, ತಂಡದಲ್ಲಿ ಗರಿಷ್ಠ 7 ಜನ ಭಾಗವಹಿಸಬಹುದಾಗಿದೆ. ಜಾನಪದ ಗೀತೆಯ ಗರಿಷ್ಠ ಅವಧಿ 7 ನಿಮಿಷಗಳು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಪ್ರಶಸ್ತಿಪತ್ರ ನೀಡಲಾಗುವುದು ಎಂದು ವೀಣಾ ಅಠವಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

FOLK SONG SINGING, COMPITATION, IN HUBBALLI,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net