ಜಾನಪದ ಸಂಸ್ಕೃತಿ ಶ್ರೀಮಂತ

sri janapdas
ಶೃಂಗೇರಿ ತಾಲೂಕು ಜಾನಪದ ಪರಿಷತ್ ವೈಕುಂಠಪುರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ವೆಂಕಪ್ಪ ಆಚಾರ್ಯ ಅವರನ್ನು ಸನ್ಮಾನಿಸಿದರು. ಟಿ.ಟಿ.ಕಳಸಪ್ಪ, ಸುಷ್ಮಾ ಸುರೇಂದ್ರ, ಶ್ರೀಕರ, ವನಜಾಕ್ಷಿ ಇತರರಿದ್ದರು.
Published on

ಶೃಂಗೇರಿ: ಕರ್ನಾಟಕದ ಜಾನಪದ ಸಂಸ್ಕೃತಿ ಶ್ರೀಮಂತವಾಗಿದೆ. ಯಾವುದೇ ಅಧಿಕಾರದ ಪೋಷಣೆ ಇಲ್ಲದೆ ಬೆಳೆದ ಜಾನಪದ ಸಂಸ್ಕೃತಿ ನಮ್ಮ ಪಾರಂಪರಿಕ ಮೌಲ್ಯಗಳ ಮೂಲಬೇರು ಎಂದು ಸಂಸ್ಕೃತಿ ಚಿಂತಕ ವೆಂಕಪ್ಪ ಆಚಾರ್ಯ ತಿಳಿಸಿದರು.

ಶನಿವಾರ ತಾಲೂಕು ಜಾನಪದ ಪರಿಷತ್ತು ವೈಕುಂಠಪುರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾನಪದ ಸಂಸ್ಕಾರಗಳು ವಿಷಯದ ಕುರಿತು ಮಾತನಾಡಿದರು.

ಜನಪದ ಸಂಸ್ಕೃತಿ ಗ್ರಾಮೀಣ ಸೊಗಡನ್ನು ಸಮೃದ್ಧವಾಗಿ ಹಿಡಿದಿಟ್ಟಿದೆ. ಜಾನಪದ ಕಲೆಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾವಣೆಯಾಗುವ ಸಾಂಸ್ಕೃತಿಕ ಬೇರುಗಳು. ಬೀಸುವ ಕಲ್ಲಿನ ಪದಗಳು, ಸೋಬಾನೆ ಪದಗಳು, ಭಜನೆ, ಗೊರವರ ಕುಣಿತ ಮುಂತಾದವುಗಳು ಬದುಕಿನ ಹೊಂದಾಣಿಕೆ, ಭಾವೈಕ್ಯತೆಯನ್ನು ಸಾಕ್ಷಾತ್ಕರಿಸಿ ಸಾಮಾಜಿಕ ಸಂಬಂಧಗಳ ಬೆಸುಗೆಗೆ ಪ್ರಮುಖ ಕಾರಣವಾಗಿವೆ. ರಥೋತ್ಸವ, ದೇವರ ಮೆರವಣಿಗೆಗಳು ಜನಪದ ಕಲೆಗಳಿಲ್ಲದೆ ಹಿಂದೆ ನಡೆಯುತ್ತಿರಲಿಲ್ಲ. ಸಂಸ್ಕಾರಕ್ಕೆ ಪೂರಕವಾದ ಈ ಕಲೆಯನ್ನು ಬೆಳೆಸುವತ್ತ ನಾವು ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.

ಜಿಲ್ಲಾ ಕಜಾಪ ಅಧ್ಯಕ್ಷ ಓಣಿತೋಟ ರತ್ನಾಕರ್ ಮಾತನಾಡಿ, ದೇಶಿಯ ಭಾಷೆ ಮತ್ತು ಸಂಸ್ಕೃತಿಗೆ ಮೊಬೈಲು ಹಾಗೂ ಸಾಮಾಜಿಕ ಜಾಲತಾಣದ ಹಾವಳಿಯಿಂದ ಹೆಚ್ಚಿನ ತೊಂದರೆ ಉಂಟಾಗಿದೆ. ಇದರಿಂದ ಸಾಮಾಜಿಕ ಹಾಗೂ ಮಾನವೀಯ ಸಂಬಂಧಗಳು ಮರೆಯಾಗಿವೆ. ಜಾನಪದ ಕಲೆ ಹಾಗೂ ಸಂಗೀತಗಳು ನಮ್ಮ ಏಕಾಗ್ರತೆ ಹಾಗೂ ಬೌದ್ಧಿಕ ಮಟ್ಟ ಹೆಚ್ಚಿಸಲು ಅತ್ಯಂತ ಸಹಕಾರಿ ಎಂದು ತಿಳಿಸಿದರು.

ಸಹಾಯಕ ಪೊಲೀಸ್ ಉಪನಿರೀಕ್ಷಕ ಮೋಹನ್ ರಾಜಣ್ಣ ಮಾತನಾಡಿ, ಜಾನಪದ ನಮ್ಮ ಮೂಲಸಂಸ್ಕೃತಿ. ಅದು ಆಲದ ಮರವಿದ್ದಂತೆ. ಕಲಾವಿದರು ಅದರ ಬೇರುಗಳು ಎಂದರು.

ತಾಲೂಕು ಕಜಾಪ ಮಹಿಳಾ ಘಟಕದ ಗೌರವಾಧ್ಯಕ್ಷೆ ಶೈಲಜಾ ರತ್ನಾಕರ್, ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತಾಲೂಕು ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ಕಾರ್ಯದರ್ಶಿ ರೇಣುಕಾ, ಕಾರ್ಯದರ್ಶಿ ಶೂನ್ಯ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net