ಜಾನಪದ ಶ್ರೀಮಂತಿಕೆ ಹೆಚ್ಚಿಸಿದ ಲಂಬಾಣಿ ನೃತ್ಯ

Oplus_131072
ಹಾರಕೂಡ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಬಂಜಾರ ಜಾನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಬಾಬು ಹೊನ್ನಾನಾಯಕ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಡಾ.ಬಸವರಾಜ ಸ್ವಾಮಿ, ಎಂ.ಪಿ. ರಾಠೋಡ್ ಇದ್ದರು.
Published on

ಬಸವಕಲ್ಯಾಣ: ಆಕರ್ಷಕವಾಗಿರುವ ಲಂಬಾಣಿ ನೃತ್ಯ ಜಾನಪದ ಲೋಕದ ಶ್ರೀಮಂತಿಕೆ ಹೆಚ್ಚಿಸಿದೆ. ಉಡುಗೆ-ತೊಡುಗೆ, ಆಹಾರ-ವಿಹಾರ, ಭಾಷೆ, ನಾಟ್ಯ-ಕಲೆ, ಆರಾಧನೆ ಇತ್ಯಾದಿಗಳಿಂದ ಪ್ರಾಚೀನ ಪರಂಪರೆ ಸಮುದಾಯ ಇದಾಗಿದೆ ಎಂದು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆದಿಶಕ್ತಿ ಸಾಂಸ್ಕೃತಿಕ ಕಲಾ ಸಂಘದ ಸಹಯೋಗದಡಿ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಆಯೋಜಿಸಿದ್ದ ಬಂಜಾರ ಜಾನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಬಂಜಾರ ಸಮುದಾಯ ತನ್ನದೇ ಆದ ಸಾಂಸ್ಕೃತಿಕ ಹಿರಿತನದೊಂದಿಗೆ ದೇಶಾದ್ಯಂತ ವಿಶಿಷ್ಟ ಪರಂಪರೆ ಕಾಯ್ದುಕೊಂಡು ಬರುವಲ್ಲಿ ಯಶಸ್ಸು ಕಂಡಿದೆ ಎಂದರು.

ಬಂಜಾರ ಜಾನಪದ ಸಂಭ್ರಮ ಒಂದು ದಿನ, ಒಂದು ವೇದಿಕೆಗೆ ಮೀಸಲಾಗದೆ ನಿರಂತರ ಹೊಸ ಹೊಸ ಕಲಾಪ್ರತಿಭೆಗಳು ಸಮಾಜಕ್ಕೆ ಪರಿಚಯಿಸುವಂತಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಆಯೋಜಿಸುತ್ತಿರುವ ವಿವಿಧ ಕಾರ್ಯಕ್ರಮಗಳು ಸ್ವಾಗತಾರ್ಹ. ಸರ್ಕಾರ ಇನ್ನಷ್ಟು ಹೆಚ್ಚಿನ ಅನುದಾನ ನೀಡಿ ಇಲಾಖೆಯನ್ನು ಆರ್ಥಿಕವಾಗಿ ಸಬಲೀಕರಿಸಿ ನಾಡಿನ ಸಾಂಸ್ಕೃತಿಕ ಪರಂಪರೆ ಜೀವಂತಿಕೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಿ ಎಂದು ಆಶಿಸಿದರು.

ಪ್ರಮುಖರಾದ ಬಾಬು ಹೊನ್ನಾನಾಯಕ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಡಾ.ಬಸವರಾಜ ಸ್ವಾಮಿ, ಆನಂದರಾವ ಝಳಕೆ, ವಿಜಯಕುಮಾರ ಸಂಗೋಳಗೆ, ಪಂಡಿತರಾವ ದೇಗಾಂವ, ಕಾಶಪ್ಪ ದೇಗಾಂವ, ಸಂತೋಷ ಪಾಟೀಲ್, ದಿಲೀಪ ಸ್ವಾಮಿ, ಜಯರಾಜ ಚವ್ಹಾಣ್, ಮಾಧವ ತಾಂಬೋಳೆ, ಲಕ್ಷ್ಮಣ ಚವ್ಹಾಣ್, ನಾಮದೇವ ರಾಠೋಡ್, ಸುನೀಲ್ ರಾಠೋಡ್, ಮಾರುತಿ ರಾಠೋಡ್ ಇತರರಿದ್ದರು.

ಎಂ.ಪಿ. ರಾಠೋಡ್ ಸ್ವಾಗತಿಸಿದರು. ಆಶಾ ರಾಠೋಡ್ ವಂದಿಸಿದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು. ರಾಜಶ್ರೀ ದಿಲೀಪ ಸ್ವಾಮಿ ಪ್ರಾರ್ಥನಾಗೀತೆ ನಡೆಸಿಕೊಟ್ಟರು.

ಸೀಮಾ ಕಲಖೋರಾ ತಾಂಡಾ ತಂಡದ ಲಂಬಾಣಿ ಸಾಂಸ್ಕೃತಿಕ ನೃತ್ಯ, ಕಲಬುರಗಿ ಮಹಾಳಿಂಗರಾಯ ತಂಡದ ಡೊಳ್ಳು ಕುಣಿತ, ಹಾರಕೂಡದ ಗೋದಾವರಿ ಸಿಂಧೆ ತಂಡದ ಭಜನೆ, ಏಣಕೂರಿನ ನಾಗಮ್ಮ ತಂಡದ ಕೋಲಾಟ, ವಿಜಯಲಕ್ಷ್ಮೀ ತಂಡದ ಬಂಜಾರ ಭಜನೆ, ಕಾರ್ತಿಕ ಸ್ವಾಮಿ ಯಲದಗುಂಡಿ ಸೇರಿ ವಿವಿಧ ಗ್ರಾಮಗಳಿಂದ ಆಗಮಿಸಿದ ಹತ್ತಾರು ತಂಡದವರು ಕಲಾ ಪ್ರದರ್ಶನ ನೀಡಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net