

ಚಿತ್ರದುರ್ಗ: ಜಾನಪದ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ಕರ್ನಾಟಕ ಜಾನಪದ ಪರಿಷ ತ್ ಜಿಲ್ಲಾಘಟಕದಿಂದ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅ ವರು, ಯಾವ ಶಿಷ್ಟ ಸಂಸ್ಕೃತಿಗಿಂತ ಕಡಿಮೆ ಇಲ್ಲದ ಜಾನಪದ ಜೀವನದಲ್ಲಿ ಹಾಸುಹೊಕ್ಕಾಗಿದೆ. ಸಂಸ್ಕಾರದ ಬಳುವಳಿ,ಧಾರ್ಮಿಕ,ಸಾಮಾಜಿಕ ಮೌಲ್ಯಗಳಿಗೆ ಸಹಕಾರಿಯಾಗಿರುವ ಜಾನಪದವನ್ನು ಉಳಿಸಿ ಬೆಳೆಸಲು ಸರ್ಕಾರದ ನೆರವು ಅಗತ್ಯ ಮತ್ತು ಅನಿವಾರ‌್ಯವಿದೆ ಎಂದರು.
ಜಾನಪದ ಚಿಂತನೆ ಕುರಿತು ಉಪನ್ಯಾಸ ನೀಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯ ಡಾ.ಜೆ.ಕರಿಯಪ್ಪ ಮಾಳಿಗೆ ಅವರು,ಜನಸಾಮಾ ನ್ಯರ ಬದುಕಲಿದ್ದ ಜಾನಪದವಿಂದು ವಿದ್ವಾಂಸರ ಅಧ್ಯಯನದ ವಸ್ತುವಾಗಿದೆ. ಎಲ್ಲ ಶಿಷ್ಟ ಸಾಹಿತ್ಯಗಳ ಜನನಿ,ಇಡೀ ಸಮಾಜವನ್ನು ಪ್ರತಿನಿಧಿಸು ವ ಜಾನಪದ ಸಾಹಿತ್ಯವಿಂದು ಜಾಗತೀಕರಣ ಮತ್ತು ಆಧುನಿಕ ಒತ್ತಡಗಳ ನಡುವೆ ಸಿಲುಕಿದೆ.
ಜಾನಪದವೆಂದರೆ ಕೂಡಿಸುವ,ಜಾತಿ ಮತ, ಧರ್ಮಗಳನ್ನು ಮೀರಿದ ಮಾನವೀಯ ಗುಣವುಳ್ಳದ್ದಾಗಿದೆ. ವಿಘಟಿಸುವ,ಶಿಥಿಲಗೊಳಿಸುವ ಸ್ವಾರ್ಥಕ್ಕೆ ಇಲ್ಲಿ ಅವಕಾಶವಿಲ್ಲ,ನಿತ್ಯ ಜೀವನಕ್ಕೆ ಎಲ್ಲರಿಗೂ ಬೇಕಾದ ತಾಯಿಸಂಸ್ಕೃತಿ. ಇದು ದೇಸಿ ಜ್ಞಾನದ ನೆಲೆ. ಜನಪದರು ತಮ್ಮ ಅನುಭವವನ್ನು ತಿಳಿವಳಿಕೆ ಮೂಲಕ ಕಟ್ಟಿಕೊಟ್ಟಿರುವ ಜ್ಞಾನವಾಗಿದೆ ಎಂದರು.
ಕುಡಾ ಅಧ್ಯಕ್ಷ ಎಂ.ಕೆ ತಾಜ್‌ಪೀರ್,ದಾವಣಗೆರೆ ವಿವಿ ಚಿತ್ರದುರ್ಗ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಡಾ.ವಿಜಯಕುಮಾರ್,ಪರಿ ಷತ್ ಜಿಲ್ಲಾಧ್ಯಕ್ಷ ನಿರಂಜನದೇವರಮನೆ ಹಾಗೂ ಜಿಲ್ಲಾ ಕಾರ‌್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್‌ಗೌಡಗೆರೆ ಮಾತನಾಡಿದರು. ನವೀ ನ್‌ಮಸ್ಕಲ್ ಸ್ವಾಗತಿಸಿ,ಸಂತೋಷ್‌ಕುಮಾರ್ ವಂದಿಸಿದರು. ಚಂದ್ರಪ್ಪ ಪ್ರಾರ್ಥಿಸಿದರು. ಕಲಾವಿದರು ಚೌಡಿಕೆ,ವೀರಗಾಸೆ ಡೊಳ್ಳು,ಕಹಳೆ ಮೊ ದಲಾದ ಕಲಾ ಪ್ರದರ್ಶನ ಹಾಗೂ ಗಾಯನ ಕಾರ‌್ಯಕ್ರಮವನ್ನು ಪ್ರಸ್ತುತ ಪಡಿಸಿದರು.
ಕೋಟ್
ಜಾಗತೀಕರಣದ ಈ ಕಾಲಘಟ್ಟದಲ್ಲಿ ಸಾಂಸ್ಕೃತಿಕ ವೈವಿಧ್ಯವನ್ನು ಉಳಿಸುವ ಸವಾಲಿದೆ. ಜನಪದರ ಜ್ಞಾನ,ಸಂಸ್ಕೃತಿ ಅವರ ಸಾಮಾಜಿಕ ಕಾಳಜಿ ಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ. ಕಲಾವಿದರಿಗೆ ಬದುಕನ್ನು ಕಟ್ಟಿಕೊಡುವ ಕೆಲಸವಾಗಬೇಕಿದೆ. ಚಿತ್ರದುರ್ಗ ಜಿಲ್ಲೆಯ ಜಾ ನಪದ ವೈವಿಧ್ಯತೆಗಳನ್ನು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕಿದೆ.