ಜಾನಪದ ಕಲೆಯಲ್ಲಿ ಮಹಿಳೆಯರೇ ಪರಿಣತರು

nrp womens
ಎನ್.ಆರ್.ಪುರ ತಾಲೂಕು ಬಿ.ಎಚ್.ಕೈಮರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ನ ಜಾನಪದ ಕಲಾವಿದೆ ಯಶೋದಮ್ಮ ಅವರನ್ನು ಸನ್ಮಾನಿಸಲಾಯಿತು. ಎಚ್.ಎಸ್.ಪೂರ್ಣೇಶ್, ಜಯಮ್ಮ, ಸುನಂದಮ್ಮ, ಪ್ರೇಮಾ, ಜಾನಕಮ್ಮ ಇತರರಿದ್ದರು.
Published on

ಎನ್.ಆರ್.ಪುರ: ಜಾನಪದ ಕಲೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಪರಿಣತಿ ಹೊಂದಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಹೇಳಿದರು.

ಬಿ.ಎಚ್.ಕೈಮರದ ಜಯಂತಿ ರಮೇಶ್ ಅವರ ಮನೆಯಂಗಳದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತೊಡಗಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ. ಅಂಥ ಮಹಿಳೆಯ ಹಿಂದೆ ಪುರುಷರ ಸಹಕಾರವೂ ಇದೆ ಎಂದು ಹೇಳಿದರು.

ತಾಲೂಕು ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ರಮೇಶ್ ಮಾತನಾಡಿ, ಮಹಿಳೆಯರು ಎಂದಿಗೂ ಅಬಲೆಯರಲ್ಲ. ಕಜಾಪ ಮಹಿಳಾ ಘಟಕ ಜಾನಪದ ಕಲೆ ಉಳಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸಲಿದೆ ಎಂದರು.

ಸಾಹಿತಿ ಜಯಮ್ಮ ಮಾತನಾಡಿ, ಮಹಿಳೆಯರು ಮನೆಯ ಸಂಪೂರ್ಣ ಜವಾಬ್ದಾರಿ ನಿರ್ವಹಣೆ ಮಾಡುವುದರೊಂದಿಗೆ ಸರ್ಕಾರಿ ಕೆಲಸ, ಖಾಸಗಿ ಸಂಸ್ಥೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸಮಾಜಮುಖಿ ಕೆಲಸಗಳಲ್ಲೂ ಮಹಿಳೆಯರ ಪಾತ್ರ ಇದೆ ಎಂದರು.

ಹಿರಿಯ ಜಾನಪದ ಕಲಾವಿದೆ ಯಶೋದಮ್ಮ ಹಾಗೂ ಸಾಹಿತಿ ಜಯಮ್ಮ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರಿಂದ ಜಾನಪದ ಗೀತ ಗಾಯನ ನಡೆಯಿತು.

ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಸುನಂದಮ್ಮ, ಕಜಾಪ ಮಹಿಳಾ ಘಟಕದ ಸದಸ್ಯರಾದ ಪ್ರೇಮಾ ವಾಸುದೇವ ಕೋಟ್ಯಾನ್, ಜಾನಕಮ್ಮ, ಹಿರಿಯ ಜಾನಪದ ಕಲಾವಿದೆ ಯಶೋದಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net