

ಚಿತ್ರದುರ್ಗ:ಕ್ರೀಡಾ ಇಲಾಖೆ ಪರಿಶಿಷ್ಟ ಜಾತಿ ಉಪಯೋಜನೆಯಡಿ ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರಕ್ಕೆ ಪರಿಶಿಷ್ಟ ಜಾತಿ ಯುವ ಜ ನರಿಂದ ಡಿ.8ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.ಎಸ್‌ಎಸ್‌ಎಲ್‌ಸಿ ಪಾಸ್, ಫೇಲ್ ಆದ 16 ಂದ 40 ವರ್ಷ ವಯೋಮಿತಿಯವರಿಗೆ ಡಿ.10 ರಿಂದ 17ರವರೆಗೆ ಬೆಂಗಳೂರಲ್ಲಿ ಶಿಬಿರ ಏರ್ಪಡಿಸಲಾಗಿದೆ. ಕ್ರೀಡಾ ಇಲಾಖೆಯಿಂದ ಅರ್ಜಿ ಪಡೆಯಬಹುದು. ಶಿಬಿರಾರ್ಥಿಗಳಿಗೆ ಊಟೋ ಪಹಾರ,ಸಾಮಾನ್ಯ ವಸತಿ ವ್ಯವಸ್ಥೆಯೊಂದಿಗೆ ಪ್ರಮಾಣ ಪತ್ರ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 08194-235635, ಸಹಾಯವಾಣಿ ಸಂಖ್ಯೆ 155265 ಅಥವಾ 9731251411ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.