ಜಾನಪದ ಕಲೆ ಉಳಿಸಿ ಬೆಳೆಸಿ

28. HBH. 2
Published on

ಹಗರಿಬೊಮ್ಮನಹಳ್ಳಿ: ಹಂಪಾಪಟ್ಟಣದ ಜೈ ಆಂಜನೇಯ ಬಯಲು ರಂಗಮಂದಿರದಲ್ಲಿ ನವೋದಯ ಯುವಕ ಸಂಘದಿಂದ ಗಣೇಶ ಪ್ರತಿಷ್ಠಾಪನೆ ನಿಮಿತ್ತ ಬುಧವಾರ ರಾತ್ರಿ ನಾಟಕ ಪ್ರದರ್ಶಿಸಲಾಯಿತು.

ಹಿಂದುಳಿದ ಜಾತಿ ಒಕ್ಕೂಟದ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಗ್ರಾಮದಲ್ಲಿ 45 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ರಂಗಭೂಮಿ ಕಲೆ ನಶಿಸುತ್ತಿದ್ದು, ಉಳಿಸಿ ಪ್ರೋತ್ಸಾಹಿಸಬೇಕು. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ ಎಂದರು.

ಸಂಘದ ಅಧ್ಯಕ್ಷ ವಿ.ಹನುಮಂತ, ಗ್ರಾ.ಪಂ. ಅಧ್ಯಕ್ಷೆ ಉಪ್ಪಾರ ಹುಲಿಗಮ್ಮ ಕಾಳಪ್ಪ, ಸದಸ್ಯರಾದ ಬಿ.ನಾಗರಾಜ, ಎನ್.ನಾಗರಾಜ, ಟಿ.ಮಂಜುನಾಥ, ವಿಎಸ್‌ಎಸ್‌ಎನ್ ಸದಸ್ಯ ಗಾಳಮ್ಮನವರ ಹುಲುಗಪ್ಪ, ಜಿ.ಶ್ರೀನಿವಾಸ. ಶ್ರೀ ಮಾರುತಿ ಭಜನಾ ಮಂಡಳಿ ಅಧ್ಯಕ್ಷ ಮಾಲ್ವಿ ಕೃಷ್ಣಪ್ಪ, ಪ್ರಮುಖರಾದ ರಮೇಶ್, ಬಿ.ಮಂಜುನಾಥ, ಬಜಂತ್ರಿ ಸೋಮನಾಥ, ಎಚ್.ಸೋಮನಾಥ ಬಂಟರ ಸೋಮನಾಥ, ಉಪ್ಪಾರ್ ಸೋಮನಾಥ, ಪೂಜಾರಿ ಸೋಮನಾಥ. ಟಿ.ಮಧು. ಜಿ.ಟಿ.ರಮೇಶ್. ಟೈಲರ್ ಹನುಮಂತ, ಬಿ.ಹುಲಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net