ಜಾನಪದ ಕಲೆ ಉಳಿಸಿ ಬೆಳೆಸಲು ಸಲಹೆ

CTD BCM
Published on

ಚಿತ್ರದುರ್ಗ: ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾ ರಿ ಆರ್. ಸುಬ್ರಾನಾಯ್ಕ ಹೇಳಿದರು.

ಆದರ್ಶ ಯುವಕ-ಯುವತಿ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ತುರುವನೂರು ರಸ್ತೆ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಮಾತನಾಡಿ, ಯುವಜನರು ಜಾನಪದ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಗಾಯತ್ರಿ ಶಿವರಾಂ ಮಾತನಾಡಿದರು. ಗಂಗಾಧರ್ ಅಮಕುಂದಿ ಮತ್ತು ಮೈಲಾರಿ ತಂಡದಿಂದ ಸುಗಮ ಸಂಗೀತ, ಎಂ.ಕೆ. ಹರೀಶ್, ಯಶೋದಾ ಅವರು ಜಾನಪದ ಗೀತೆ, ಪೊಲೀಸ್ ಇಲಾಖೆಯ ಮನೋಹರ್, ಡಾ.ನರಹರಿ ಕನ್ನಡ ಗೀತೆ ಗಾಯನ ಕಾರ‌್ಯಕ್ರಮ ನಡೆಸಿಕೊಟ್ಟರು.

ಜಗದೀಶ್, ಚನ್ನಬಸಪ್ಪ ಅವರಿಂದ ತತ್ವಪದ, ದಾಸರ ಪದ, ಶಿವಣ್ಣ ತಂಡದಿಂದ ಗೊರವರ ಕುಣಿತ, ಅನುಷಾ, ನಂದಿನಿ, ಭೂಮಿಕಾ,ಪಲ್ಲವಿ ತಂಡದವರು ಜಾನಪದ ನೃತ್ಯ ಪ್ರದರ್ಶನ ನೀಡಿದರು.

ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಪುಷ್ಪಲತಾ ಬಾವಿಮಠ್, ಸಂಘದ ಕಾರ್ಯದರ್ಶಿ ಓಂಕಾರಮ್ಮ ಶ್ರೀನಿವಾಸ್, ಪತ್ರಾಂಕಿತ ವ್ಯವಸ್ಥಾಪಕಿ ವಸಂತಮ್ಮ, ನಿಲಯ ಮೇಲ್ವಿಚಾರಕರಾದ ದೀಪರಾಣಿ, ಲಕ್ಷ್ಮೀ, ಸಕಿನಾಬಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net