ಜಾನಪದ ಕಲೆ ಉಳಿಸಬೇಕಿದೆ

Janapada
Published on

ಚಿತ್ರದುರ್ಗ: ಗ್ರಾಮೀಣ ಭಾಗದ ಜಾನಪದ ಕಲೆ ಬದುಕಿಗೆ ಪೂರಕ. ಹೀಗಾಗಿ ಉಳಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ನಗರಸಭೆ ಸದಸ್ಯ ಎಚ್.ಶ್ರೀನಿವಾಸ್ ಸಲಹೆ ನೀಡಿದರು.

ಹುಲ್ಲೇಹಾಳ್‌ನ ಬುದ್ಧ ಕ್ರೀಡಾ ಮತ್ತು ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ವಾಸುದೇವರೆಡ್ಡಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಸಿರಿ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಕಲೆ, ಕಲಾವಿದರ ಉಳಿವಿಗೆ ಪ್ರೋತ್ಸಾಹ ಅಗತ್ಯವಿದೆ. ಮೂಲ ಸಂಸ್ಕೃತಿ ನಾಶವಾಗಲು ಬಿಡಬಾರದು ಎಂದರು.

ಕಸಾಪ ತಾಲೂಕು ಅಧ್ಯಕ್ಷ ಡಾ.ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜಾನಪದ ಕಲೆ ಪರಿಚಯಿಸಬೇಕಿದೆ. ಸಮಾಜಕ್ಕೆ ಉತ್ತಮ ಸಂದೇಶ ಸಾರಲು ಸಹಕಾರಿಯಾಗಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷೆ ರೇಖಮ್ಮ, ಕಾರ್ಯದರ್ಶಿ ಡಿ.ನಾಗರಾಜ್, ಎಸ್‌ಐ ಯಶೋಧಾ, ವಕೀಲ ಎಸ್.ವಿಜಯಕುಮಾರ್, ಕೃಷ್ಣಪ್ಪ ಎ.ಹುಲ್ಲೂರು, ಮುಖ್ಯಶಿಕ್ಷಕಿ ಪದ್ಮಾ, ಶಿಕ್ಷಕರಾದ ರಾಮಲಿಂಗಪ್ಪ, ನಾಗರಾಜ್, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net