ಜಾನಕಲ್​ಗಿಲ್ಲ ನೀರಿನ ಭಾಗ್ಯ!

bukka
Published on

ಶುದ್ಧ ಟಕ ಕೆಟ್ಟು 3 ವರ್ಷಗಳಾದರೂ ದುರಸ್ತಿ ಇಲ್ಲ, 7 ಕಿಮೀ ಕ್ರಮಿಸುವುದು ಅನಿವಾರ್ಯ

ಕಿರಣ್​ ಬುಕ್ಕಾಪಟ್ಟಣ

ಶುದ್ಧ ಕುಡಿಯುವ ನೀರಿನ ಟಕ ಕೆಟ್ಟು ನಿಂತು ಮೂರು ವರ್ಷಗಳೇ ಕಳೆದರೂ ದುರಸ್ತಿ ಮಾಡದ ಕಾರಣ ಕುಡಿಯುವ ನೀರಿಗಾಗಿ ಜನರು ಪ್ರತಿನಿತ್ಯ ಪರದಾಡುವಂತಹ ಸ್ಥಿತಿ ಬುಕ್ಕಾಪಟ್ಟಣ ಹೋಬಳಿಯ ರಾಮಲಿಂಗಾಪುರ ಗ್ರಾಪಂ ವ್ಯಾಪ್ತಿಯ ಜಾನಕಲ್​ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಹೌದು, ರಾಮಲಿಂಗಾಪುರ ಗ್ರಾಪಂನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಜಾನಕಲ್​. ಈ ಗ್ರಾಮದ ಜನಸಂಖ್ಯೆಯನ್ನು ಅರಿತು ಶುದ್ಧ ಕುಡಿಯುವ ನೀರಿನ ಟಕ ಸ್ಥಾಪನೆ ಮಾಡಲಾಗಿತ್ತು. ಆದರೆ ಈ ಟಕ 3 ವರ್ಷಗಳ ಹಿಂದೆ ಟಕ ಕೆಟ್ಟು ನಿಂತಿದೆ. ಅಂದಿನಿಂದ ಇಂದಿನವರೆಗೂ ಗ್ರಾಮದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ನೀರಿಗಾಗಿ ತಮ್ಮ ಕೆಲಸ ಕಾರ್ಯ ಊರೂರು ಅಲೆಯಬೇಕಾಗಿದೆ. ಇನ್ನು ವಾಹನ ಸೌಕರ್ಯ ಇಲ್ಲದವರ ಸ್ಥಿತಿ ಹೇಗೆ? ಎಂಬ ಬಗ್ಗೆ ಸ್ಥಳಿಯ ಆಡಳಿತಕ್ಕೆ ಚಿಂತೆ ಇದ್ದಂತಿಲ್ಲ. 2000 ಸಾವಿರ ಜನಸಂಖ್ಯೆ ಹೊಂದಿರುವ ಜಾನಕಲ್​ ಗ್ರಾಮದಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಬಗ್ಗೆ ರಾಮಲಿಂಗಾಪುರ ಗ್ರಾಮ ಪಂಚಾಯಿತಿ ಆಡಳಿತ ಈವರೆಗೂ ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸ.

ಗ್ರಾಮಕ್ಕೆ ಹೊಂದಿಕೊಂಡಂತೆ ಕರ್ಪೂರಕಟ್ಟೆ, ಬಸವನಹಳ್ಳಿ ಎಂಬ ಬೇಚಾರ್​ ಗ್ರಾಮಗಳಿದ್ದು, ಆ ಗ್ರಾಮಗಳ ಜನರು ತೋಟ, ಹೊಲಗಳಲ್ಲಿ ವಾಸವಾಗಿದ್ದಾರೆ. ಜಾನಕಲ್​ ಗ್ರಾಮವೇ ಅವರಿಗೆ 5 ಕಿ.ಮೀ ಆಗುತ್ತದೆ. ಅಲ್ಲಿನ ಜನರು ಶುದ್ಧ ಕುಡಿಯುವ ನೀರು ತರಲು 7 ಕಿ.ಮೀ ದೂರದ ಮಾದೇನಹಳ್ಳಿಗೆ ಹೋಗಿ ಬರಬೇಕಾದ ದಯನೀಯ ಸ್ಥಿತಿ ಸೃಷ್ಟಿಯಾಗಿದೆ. ಗ್ರಾಮಸ್ಥರು ಟಕದ ದುರಸ್ತಿಗೆ ಹಲವು ಬಾರಿ ಮನವಿ ಮಾಡಿದರೂ ಗ್ರಾಪಂ ಅಥವಾ ಸಂಬಂಧಪಟ್ಟ ಅಧಿಕಾರಿಗಳು ರ್ನಿಲಕ್ಷ$್ಯ ವಹಿಸಿದ್ದಾರೆ. ತಕ್ಷಣ ಈ ಬಗ್ಗೆ ಗಮನಹರಿಸಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ಜನರ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಬೊರ್​ವೆಲ್​ ಕೊರೆಸುವುದೇ ಕಷ್ಟ: ಜಾನಕಲ್​ ಗ್ರಾಮದಲ್ಲಿ ಇರುವ ಭೂಮಿಯಲ್ಲಿ ಅತಿ ಹೆಚ್ಚು ಗಟ್ಟಿಯಾದ ಬಂಡೆಗಳು ಸಿಗುವ ಕಾರಣ ಬೋರ್ವೆಲ್​ ಕಂಪನಿಯವರು ಜಾನಕಲ್​ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಒಂದೊಮ್ಮೆ ಕೊಳವೆ ಬಾವಿ ಕೊರೆದು ನೀರು ಬಂದರೂ ನೀರಿನಲ್ಲಿ ಫ್ಲೋರೈಡ್​ ಅಂಶ ಹೆಚ್ಚಿದೆ. ಇಲ್ಲಿನ ನೀರನ್ನು ಕುಡಿದವರಿಗೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಜನರು ಪ್ರತಿನಿತ್ಯ ಶುದ್ಧ ನೀರಿಗಾಗಿ ಪರದಾಡಬೇಕಾಗಿದೆ.

ಜಾನಕಲ್​ ಗ್ರಾಮದ ಶುದ್ಧ ನೀರಿನ ಘಟಕದ ದುರಸ್ತಿಯನ್ನು ಒಂದೆರಡು ಬಾರಿ ಮಾಡಿಸಿದೆಯಾದರೂಅದು ಸರಿಯಾಗಿಲ್ಲ. ದುರಸ್ತಿ ಕಾರ್ಯಕ್ಕೆ ಮಿಷಿನರಿ ಬದಲಾವಣೆಗೆ ಬಹಳಷ್ಟು ಖರ್ಚು ಬರಲಿದೆ. 15ನೇ ಹಣಕಾಸು ಯೋಜನೆಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು | ಮಾರಣ್ಣ ಪಿಡಿಒ ರಾಮಲಿಂಗಾಪುರ ಗ್ರಾಪಂಬಸವನಹಳ್ಳಿಯಲ್ಲಿ ವಾಸಿಸುವ ನಾವು ಶುದ್ಧ ಕುಡಿಯುವ ನೀರನ್ನು ತರಲು 7 ಕಿ.ಮೀ. ದೂರದ ಮಾದೇನಹಳ್ಳಿಗೆ ಹೋಗಬೇಕಾಗಿದೆ. ನಮ್ಮೂರಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಮೂರು ವರ್ಷಗಳಾಗಿದೆ. ಎರಡು ಮೂರು ಬಾರಿ ದುರಸ್ತಿ ಮಾಡಿಸಿದರೂ ಪ್ರಯೋಜನವಾಗಿಲ್ಲ. ಹಲವು ಬಾರಿ ಗ್ರಾಪಂಗೆ ಮನವಿ ಮಾಡಿಕೊಂಡರೂ ಕ್ರಮ ಕೈಗೊಂಡಿಲ್ಲ. ಉನ್ನತ ಅಧಿಕಾರಿಗಳು ಇತ್ತ ಗಮನಹರಿಸಿ ಘಟಕ ರಿಪೇರಿ ಅಥವಾ ಹೊಸ ಘಟಕ ಮಂಜೂರು ಮಾಡಲಿ.| ಶ್ರೀನಿವಾಸ್​ ಗ್ರಾಪಂ ಸದಸ್ಯ, ಜಾನಕಲ್​, ರಾಮಲಿಂಗಾಪುರಘಟಕ ಸ್ಥಾಪನೆಯಾದ ಕೇವಲ ಒಂದು ವರ್ಷ ಮಾತ್ರ ನೀರು ಪೂರೈಸಿತು. ಆ ನಂತರ ಸ್ಥಳಿಯ ಗ್ರಾಪಂ ಸದಸ್ಯರು ಒಂದೆರಡು ಬಾರಿ ದುರಸ್ತಿ ಮಾಡಿಸಿದ್ದರು. ಈಗ ಕೆಟ್ಟು 3 ವರ್ಷವಾಗಿದೆ. ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗಿಲ್ಲ. ಗ್ರಾಪಂನಿಂದ ಪೂರೈಸುವ ನೀರು ಬಿಟ್ಟರೆ ಬೇರೆ ದಾರಿ ಇಲ್ಲ.| ಶಿವಕುಮಾರ್​ ಜಾನಕಲ್​ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net