

ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಬಂಜಾರ ಸಮುದಾಯದ ಡಾ.ಉಮೇಶ ಜಾಧವ್ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು, ಅವರಿಗೆ ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಲಾಗಿದೆ ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಾಬುರಾವ ಚವ್ಹಾಣ್ ತಿಳಿಸಿದರು.
ಕಾಂಗ್ರೆಸ್ ಸಮಾಜದವರಿಗೆ ಟಿಕೆಟ್ ನೀಡದೆ ಮೋಸ ಮಾಡಿದೆ, ಸಚಿವ ಸ್ಥಾನವನ್ನು ನೀಡದೆ ಅನ್ಯಾಯ ಮಾಡಿದೆ, ಸಮಾಜದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿ ಆರೋಪಿಸಿದರು. ಬಂಜಾರ ಸಮುದಾಯದ ನಾಯಕರಿದ್ದರೂ ಸಹ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕುಟುಂಬದವರಿಗೆ ಟಿಕೆಟ್ ನೀಡಿ, ಕುಟುಂಬ ರಾಜಕೀಯ ಮಾಡಿz್ದÁರೆ. ಆದ್ದರಿಂದ ಬಿಜೆಪಿಗೆ ಬೆಂಬಲಿಸಲು ಸಂಘ ನಿರ್ಧರಿಸಿದೆ ಎಂದರು. ಸಂಘದ ಜಿಲ್ಲಾಧ್ಯಕ್ಷ ಕ್ಷತ್ರು ರಾಠೋಡ್, ಜಗದೇವಿ ಚವ್ಹಾಣ್, ಬಾಬು ಪವಾರ ಇತರರಿದ್ದರು.