ಜಾತ್ರೆಯಲ್ಲಿ ಐವರ ಚಿನ್ನಾಭರಣ ಕಳ್ಳತನ

Crime Logo
Published on

ಕಲಬುರಗಿ: ಶರಣಬಸವೇಶ್ವರರ ಜಾತ್ರೆಯ ರಥೋತ್ಸವ ವೇಳೆ ಜನಸಂದಣಿಯಲ್ಲಿ ಐವರಿಂದ 1.82 ಲ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ನಡೆದಿದೆ. ಮಾದೇವಪ್ಪ ಸಿದ್ದಣ್ಣ ಅವರ ಕೊರಳಲ್ಲಿದ್ದ 45 ಸಾವಿರ ರೂ. ಮೌಲ್ಯದ ಚಿನ್ನದ ಸರ, ಡಾ.ಉಮೇಶಚಂದ್ರ ಗುರುಗುಂಟಿ ಅವರ 75 ಸೌವಿರ ರೂ. ಮೌಲ್ಯದ ಚೈನ್​, ನಾಗಮ್ಮ ಅವರ ತಾಳಿ ಸೇರಿ 20 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಸೌಭಾಗ್ಯ ಅವರ ಕೊರಳಿನ 10 ಗ್ರಾಂ ಚಿನ್ನದ ತಾಳಿ, ವಿಠಲ್​ ಬಿರಾದಾರ ಅವರ 22 ಸಾವಿರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಆರ್​.ಜಿ.ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net