ಜಾತ್ರೆಗಳು ಸಾಮರಸ್ಯದ ಸಂಕೇತ

28blk3
 ಭಾಲ್ಕಿ ತಾಲೂಕಿನ ಭಾತಂಬ್ರಾದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಹಾದೇವ ಬೇಲೂರೆ, ಗ್ರಾಪಂ ಅಧ್ಯಕ್ಷ ಮಹಾಂತೇಶ ಪಾಟೀಲ್ , ಕಾಶಿನಾಥ ಲದ್ದೆ ಇತರರಿದ್ದರು.
Published on

ಭಾಲ್ಕಿ: ಜಾತ್ರೆಗಳು ನಾಗರಿಕರಲ್ಲಿ ಭಾವನಾತ್ಮಕ ಗುಣಗಳನ್ನು ಬೆಳೆಸುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಭಾತಂಬ್ರಾ ಗ್ರಾಮದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗಟ್ಟಿಸುವ ಸಾಮರಸ್ಯದ ಸಂಕೇತವಾಗಿದ್ದು, ಧಾರ್ಮಿಕ ಆಚರಣೆಗಳು ಮನುಷ್ಯನ ಅವಿಭಾಜ್ಯ ಅಂಗಗಳಾಗಿವೆ. ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಲಭಿಸುತ್ತದೆ ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಹಾದೇವ ಬೇಲೂರೆ, ಗ್ರಾಪಂ ಅಧ್ಯಕ್ಷ ಮಹಾಂತೇಶ ಪಾಟೀಲ್ , ಕಾಶಿನಾಥ ಲದ್ದೆ, ಪ್ರಥಮ ದರ್ಜೆ ಗುತ್ತಿಗೆದಾರ ರವೀಂದ್ರ ಚಿಡಗುಪ್ಪೆ, ಜೈರಾಜ್ ಪಾಟೀಲ, ನಾಗಪ್ಪ ಗಾಮಾ, ವಿಜಯಕುಮಾರ ಗಾಮಾ, ಸತೀಶ ಬಿರಾದಾರ, ಶಿವಕುಮಾರ ಕಾಪಸೆ, ಸುರೇಶ ವಾಡೆ, ವೀರೇಶ ಭೂರಾಳೆ, ಓಂಕಾರ ರಾಮಶಟ್ಟೆ, ಭಯ್ಯಾ, ಗುರುರಾಜ ಸ್ವಾಮಿ, ವಿಶ್ವ ಹೂಗಾರ,ಶಂಕರ ಗುಬ್ಬೆ, ಚನ್ನಬಸವ ಟೋಕರೆ, ಸಂಗಮೇಶ ವಾಡೆ ಇತರರಿದ್ದರು.

ಕುಸ್ತಿ ವಿಜೇತರಿಗೆ ಬಹುಮಾನ: ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಲಾತೂರಿನ ತುಕಾರಾಮ ಮನೋಹರ ೧೧ತೊಲ ಬೆಳ್ಳಿ ಕಡಗ ಮತತ್ತು ದ್ವಿತೀಯ ಸ್ಥಾನ ಪಡೆದ ನೀಲಂಗಾದ ಪವನ ಗೋರೆ ಅವರಿಗೆ ೫ ಸಾವಿರ ರೂ.ನಗದು ಬಹುಮಾನವನ್ನು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಹಾದೇವ ಬೇಲೂರೆ ವಿತರಿಸಿದರು. ಗ್ರಾಪಂಅಧ್ಯಕ್ಷ ಮಹಾಂತೇಶ ಪಾಟೀಲ್, ಪ್ರಮುಖರಾದ ಕಾಶಿನಾಥ ಲದ್ದೆ, ಶ್ರೀಕಾಂತ ಭೂರಾಳೆ, ನಾಗಪ್ಪ ಗಾಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net