ಜಾತ್ರೆಗಳು ಜಾನಪದ ಸಂಸ್ಕೃತಿ ಪ್ರತೀಕ

26-kkr5(11-24......................
Published on

ಧರ್ಮದರ್ಶಿ ಬಿ.ಎನ್. ಗಜೇಂದ್ರ ಅಭಿಮತ

ಕಿಕ್ಕೇರಿ : ಜಾತ್ರೆಗಳು ಜಾನಪದ ಸಂಸ್ಕೃತಿ ಪ್ರತೀಕವಾಗಿದ್ದು, ಅವುಗಳನ್ನು ಉಳಿಸಿ, ಬೆಂಬಲಿಸುವ ಚಟುವಟಿಕೆ ಹೆಚ್ಚಾಗಲಿ ಎಂದು ಕಾರೆಮೆಳೆ ಸಿಂಗಮ್ಮ ದೇಗುಲ ಧರ್ಮದರ್ಶಿ ಬಿ.ಎನ್.ಗಜೇಂದ್ರ ತಿಳಿಸಿದರು.

ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರೇಮೆಳೆ ಸಿಂಗಮ್ಮ ಜಾತ್ರೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೇವರು ನಮಗೆ ಕೊಟ್ಟ ಸಂಪತ್ತಿನ ಕಿಂಚಿತ್ ಭಾಗವಾದರೂ ನೊಂದವರಿಗೆ, ದುರ್ಬಲರ ಸೇವೆಗೆ ಅರ್ಪಿಸಿದರೆ ಸಾರ್ಥಕವಾಗುತ್ತದೆ. ಇಲ್ಲಿನ ಶಕ್ತಿದೇವಿಯ ಕೃಪೆಯಿಂದ ನಾನು ಸುಂದರ ಬದುಕು ಕಟ್ಟಿಕೊಂಡಿದ್ದೇನೆ. ಸೇವೆಗೂ ಬದ್ಧನಾಗಿದ್ದೇನೆ ಎಂದರು. ಕ್ಷೇತ್ರಕ್ಕೆ ಶೋಭೆ ನೀಡಲು ಮಾದಾಪುರ ಹ್ಯಾಂಟ್‌ಪೋಸ್ಟ್ ಮಾರ್ಗದಲ್ಲಿ ವಿಮಾನಗೋಪುರದ ಹೆಬ್ಬಾಗಿಲು ನಿರ್ಮಿಸಿರುವೆ. ಕ್ಷೇತ್ರದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿರುವೆ. ಪ್ರತಿವರ್ಷ ಸಾವಿರಾರು ಭಕ್ತರಿಗೆ ಜಾತ್ರೆ ದಿನ ನಿರಂತರ ಅನ್ನದಾಸೋಹ ಮಾಡಲಾಗುತ್ತಿದೆ ಎಂದರು. ಗ್ರಾಮಸ್ಥರ ಕೋರಿಕೆಯಂತೆ ದೇಗುಲ ಅಭಿವೃದ್ಧಿಗೆ ಟ್ರಸ್ಟ್ ರಚನೆ ಮಾಡಲಾಗುವುದು. ದೇಗುಲಕ್ಕೆ ವಿದ್ಯುತ್ ಸಂಪರ್ಕ, ಸೌಕರ್ಯ, ಸಮುದಾಯಭವನ ನಿರ್ಮಾಣ, ಅರ್ಚಕರಿಗೆ ಮೂಲ ಸೌಲಭ್ಯ ಕಲ್ಪಿಸಲು ಗ್ರಾಮಸ್ಥರೂ ಸಹಕರಿಸಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯದೊಂದಿಗೆ ಇದನ್ನು ಮಾದರಿ ಕ್ಷೇತ್ರ ಮಾಡಲು ತಾವು ಸಿದ್ಧರಿರುವುದಾಗಿ ಬಿ.ಎನ್.ಗಜೇಂದ್ರ ಹೇಳಿದರು. ಇದೇ ಸಂದರ್ಭ ಎಚ್.ಜಿ. ಮಂಜುಳಾ, ಜಿ. ಮದನ್ ರೆಡ್ಡಿ, ಜಿ. ಮಾಲಾ, ಜಿ. ಮನೋಹರ್ ಅವರಿಗೆ ಗೌರವಿಸಲಾಯಿತು. ಗ್ರಾಪಂ. ಸದಸ್ಯ ರಾಜಶೇಖರಮೂರ್ತಿ, ಎನ್.ಎನ್. ಪರಮೇಶ್, ಬಸವರಾಜು, ಗಿರೀಶ್, ಮುನಿರಾಜರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net