ಜಾತ್ರಾ ಮಹೋತ್ಸವ ಸರಳ ಆಚರಣೆಗೆ ಸಹಕರಿಸಿ

02 upbr 1-Jatra sabhe
Published on

ಉಪ್ಪಿನಬೆಟಗೇರಿ: ಗ್ರಾಮದ ಐತಿಹಾಸಿಕ ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವವನ್ನು ಪ್ರಸಕ್ತ ವರ್ಷ ಕರೊನಾ ನಿಯಮಾವಳಿ ಪ್ರಕಾರ ಸರಳವಾಗಿ ಆಚರಿಸುವ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

ಗ್ರಾಮದ 3 ಸಾವಿರ ವಿರಕ್ತಮಠದಲ್ಲಿ ಗುರುವಾರ ಸಂಜೆ ಜರುಗಿದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀ ಮಠದ ಜೀಣೋದ್ಧಾರಕ್ಕಾಗಿ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಬಹಳ ಪ್ರಾಚೀನ ಮಠ ಇದಾಗಿದ್ದು, ಮಠ, ಮಾನ್ಯಗಳು ಉಳಿಯಬೇಕಾಗಿವೆ. ಗ್ರಾಮದಲ್ಲಿ ಏನೇ ಅಭಿವೃದ್ಧಿ ಕಾರ್ಯಗಳಿದ್ದರೂ ಅವುಗಳನ್ನು ನಡೆಸಿ ಕೊಡಲು ಬದ್ಧನಿದ್ದೇನೆ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಶ್ರೀಮಠದ ಜೀಣೋ ದ್ಧಾರಕ್ಕೆಂದು ಶಾಸಕರು ಅನುದಾನ ಬಿಡುಗಡೆ ಮಾಡಿಸಿರುವುದು ಶ್ಲಾಘನೀಯ ಎಂದರು.

ತಹಸೀಲ್ದಾರ್ ಸಂತೋಷಕುಮಾರ ಬಿರಾದಾರ, ಸಿಪಿಐ ಎಸ್.ಸಿ. ಪಾಟೀಲ, ವಕೀಲ ರವೀಂದ್ರ ಯಲಿಗಾರ, ಕಲ್ಲಪ್ಪ ಪುಡಕಲಕಟ್ಟಿ ಮಾತನಾಡಿದರು. ಈ ವೇಳೆ ಶಾಸಕ ಅಮೃತ ದೇಸಾಯಿ ಅವರನ್ನು ಶ್ರೀಗಳು ಹಾಗೂ ಹಿರಿಯರು ಸನ್ಮಾನಿಸಿದರು. ವೀರಣ್ಣ ಪರಾಂಡೆ, ತವನಪ್ಪ ಅಷ್ಟಗಿ, ಚನ್ನಬಸಪ್ಪ ಮಸೂತಿ, ಅಶೋಕ ಮಸೂತಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಆಯಟ್ಟಿ, ಉಪಾಧ್ಯಕ್ಷ ಅಬ್ದುಲ್ ಲಂಗೋಟಿ, ಗರಗ ಪಿಎಸ್​ಐ ಕಿರಣ ಮೋಹಿತೆ, ತಾಪಂ ಇಒ ಎಸ್.ಎಸ್. ಕಾದ್ರೊಳ್ಳಿ, ಪಿಡಿಒ ಬಿ.ಎ. ಬಾವಾಕಾನವರ, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸುರೇಶಬಾಬು ತಳವಾರ, ಬಸವರಾಜ ಕಬ್ಬೂರ, ಕಾಶಪ್ಪ ದೊಡವಾಡ ಕಾರ್ಯಕ್ರಮ ನಿರ್ವಹಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net