

ಕಲಬುರಗಿ: ಕಾಂತರಾಜು ವರದಿಯಿಂದ ಕೋಲಿ, ಕಬ್ಬಲಿಗ, ಬೆಸ್ತ ಸಮುದಾಯಕ್ಕೆ ರ‍್ಕಾರದಿಂದ ಅನ್ಯಾಯವಾಗಿದೆ. ವಾಸ್ತವದ ಅಡಿ ಮತ್ತೊಮ್ಮೆ ವೈಜ್ಞಾನಿಕ ವರದಿ ನೀಡಬೇಕು ಎಂದು ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕೃಷ್ಣಾ ಮೇಲ್ದಂಡೆ ಯೋಜನೆ ಮಾಜಿ ಅಧ್ಯಕ್ಷ ಶರಣಪ್ಪ ಆರ್.ತಳವಾರ ಆಗ್ರಹಿಸಿದರು.
ಎಚ್.ಕಾಂತರಾಜು ನೇತೃತ್ವದ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಣಿಕ -ರ‍್ಥಿಕ ಸಮೀಕ್ಷೆ ಮಾಹಿತಿ ಆಧರಿಸಿ ಹಿಂದುಳಿದ ರ‍್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅಂಕಿ-ಸಂಖ್ಯೆ ಅವೈಜ್ಞಾನಿಕ ತಿರುಚಿ ಹಿಂದುಳಿದ ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಇದರ ರ‍್ಯಾಯ ಪದಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳ ಮಾಹಿತಿ ಪ್ರಕಾರ ಕೋಲಿ, ಕಬ್ಬಲಿಗ, ಬೆಸ್ತ್ ಮತ್ತು ಇದರ ರ‍್ಯಾಯ ಪದಗಳ ಜನಸಂಖ್ಯೆ ೧೪.೫ ಲಕ್ಷ ಎಂದಿದೆ. ಅದರಲ್ಲಿ ಬೆಸ್ತ (೩,೯೯,೩೮೩), ಅಂಬಿಗ (೧,೩೪,೨೩೦), ಗಂಗಾಮತ (೭೩,೬೨೭), ಕಬ್ಬೇರ (೫೮,೨೮೯), ಕಬ್ಬಲಿಗ (೩,೮೮,೦೮೨) ಮತ್ತು ಮೊಗವೀರ (೧,೨೧,೪೭೮) ಎಂದು ತೋರಿಸಲಾಗಿದೆ ಎಂದರು.
೧೯೭೭ರಲ್ಲಿ ಹಾವನೂರು ವರದಿ ಆಧರಿಸಿದ ರ‍್ನಾಟಕ ರ‍್ಕಾರದ ಮೀಸಲಾತಿ ಆದೇಶದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ್ ಮತ್ತು ಇದರ ರ‍್ಯಾಯ ಪದಗಳನ್ನು ಹಿಂದುಳಿದ ಜಾತಿಗಳಲ್ಲಿ (ಬಿಸಿಟಿ) ಸೇರಿಸಲಾಗಿತ್ತು. ೧೯೯೪ರಲ್ಲಿ ಚಿನ್ನಪ್ಪರೆಡ್ಡಿ ವರದಿ ಅನುಸಾರ ಇದೇ ಜಾತಿಯ ೩೯ ರ‍್ಯಾಯ ಪದಗಳನ್ನು ಪ್ರರ‍್ಗ&-೧ರ ಗುಂಪಿನಲ್ಲಿ ಸೇರಿಸಲಾಯಿತು. ಎಲ್ಲ ರ‍್ಯಾಯ ಪದಗಳು ಒಟ್ಟಾಗಿ ನೋಡಿದರೆ ೩೫ರಿಂದ ೪೦ ಲ ಜನಸಂಖ್ಯೆ ಇದೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲೇ ಕೋಲಿ -ಕಬ್ಬಲಿಗರದ್ದು ೬&-೭ ಲ ಜನಸಂಖ್ಯೆ ಇದೆ. ರಾಯಚೂರು, ಬೆಳಗಾವಿ, ಬಾಗಲಕೋಟೆ, ಹಾವೇರಿ, ಬಳ್ಳಾರಿ, ಮಂಗಳೂರು, ಉಡುಪಿ, ಕಾರವಾರ, ಮಂಡ್ಯ, ಮೈಸೂರು, ಮುಂತಾದ ಜಿಲ್ಲೆಗಳಲ್ಲಿ ಹೆಚ್ಚು ಜನಸಂಖ್ಯೆ ಇದೆ ಎಂದು ಸ್ಪಷ್ಟಪಡಿಸಿದರು.
ಕಾಂತರಾಜು ವರದಿಯನುಸಾರ ಕೋಲಿ, ಕಬ್ಬಲಿಗ, ಬೆಸ್ತ ಜಾತಿಗಳನ್ನು ೧೪.೫ ಲಕ್ಷ ಎಂದು ತೋರಿಸಿರುವುದು ಸಮುದಾಯದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಸ್ತ, ಅಂಬಿಗ, ಗಂಗಾಮತ, ಕಬ್ಬೇರ, ಕಬ್ಬಲಿಗ ಮತ್ತು ಮೊಗವೀರ ರ‍್ಯಾಯ ಪದಗಳ ಜನಸಂಖ್ಯೆಗೆ ಪ್ರತ್ಯೇಕವಾಗಿ ಅನ್ಯಾಯವಾಗುತ್ತದೆ. ವಾಸ್ತವದ ಅಡಿ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಅಮೃತ ಎಚ್.ಡಿಗ್ಗಿ, ಶಿವಶರಣಪ್ಪ ಜಮಾದಾರ, ಸುರೇಶ ಹೂಡಗಿ, ತುಕ್ಕಪ್ಪ ಸುಲೇಪೇಟ, ಆನಂದ ಇತರರಿದ್ದರು.