ಜಾತಿಗಣತಿ ಸಮೀಕ್ಷೆಯಲ್ಲಿ ಶಿವಾರ್ಚಕ ಎಂದೇ ಬರೆಸಿ

06 SARAG 1
ಸರಗೂರು ತಾಲೂಕಿನ ಪಟ್ಟಣದ ಜೈನ್ ಭವನದಲ್ಲಿ ಶಿವಾರ್ಚಕ ಸಂಘದ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಎಂ.ಮಲ್ಲಣ್ಣ, ಮಹದೇವಸ್ವಾಮಿ, ಯಶ್ವಂತ್, ಮಹದೇವಸ್ವಾಮಿ, ರವಿಶಾಸ್ತ್ರಿ, ನಾಗರಾಜಪ್ಪ, ಸಿ.ನಾಗರಾಜು, ಸುಬ್ಬಣ್ಣ, ಪ್ರಸನ್ನ ಕುಮಾರ್, ಕುಂದೂರು ವೀರಣ್ಣ ಇದ್ದರು.
Published on

ಸರಗೂರು: ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಸಮುದಾಯದವರು ಶಿವಾರ್ಚಕ ಎಂದು ಬರೆಸಬೇಕು ಎಂದು ಶಿವರ್ಚಾಕ ಸಂಘದ ರಾಜ್ಯ ಅಧ್ಯಕ್ಷ ಹಾಗೂ ಸಂಸ್ಕೃತ ಪಾಠಶಾಲೆ ಶೈವಾಗಮ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಎಂ.ಮಲ್ಲಣ್ಣ ಮನವಿ ಮಾಡಿದರು.

ಪಟ್ಟಣದ ಜೈನ ಭವನದಲ್ಲಿ ಶನಿವಾರ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಶಿವಾರ್ಚಕ ಸಂಘದಿಂದ ಹಮ್ಮಿಕೊಂಡಿದ್ದ ಸಂಘದ 2024-25 ನೇ ಸಾಲಿನ 10ನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಸಮೀಕ್ಷೆ ಮಾಡುವ ಸಮಯದಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸಿ ಎಂದು ಹೇಳುತ್ತಾರೆ. ಆದರೆ ನಾವು ಅದನ್ನು ಬದಿಗೆ ಸರಿಸಿ ಶಿವಾರ್ಚಕ ಎಂದೇ ಬರೆಸಬೇಕು ಎಂದು ತಿಳಿಸಿದರು. ಶಿವಾರ್ಚಕ ಸಮಾಜ ಅಸ್ತಿತ್ವಕ್ಕೆ ಬರಲು ಸುಮಾರು ವರ್ಷ ಬೇಕಾಗಿದೆ. ಶಿವಾರ್ಚಕ ಸಮಾಜ ಏಳು ಜಿಲ್ಲೆಯಲ್ಲಿ ಮಾತ್ರ ಇದೆ. ಈ ಸಮಾಜ 1915ರಲ್ಲಿ ಪ್ರಾರಂಭವಾಗಿದ್ದು, 35 ವರ್ಷದವರೆಗೆ ಸಮಾಜ ದೇವರ ಪೂಜೆ, ಪುನಸ್ಕಾರ ಮಾಡಿಕೊಂಡೆ ಬರುತ್ತಿದೆ. ಆದ್ದರಿಂದ ಸಮಾಜಕ್ಕೆ ಹೆಚ್ಚು ಅವಕಾಶಗಳು ಒದಗಿಸಲು ಮುಂದಾಗಿಲ್ಲ. ನಾವು ಒಗ್ಗಟ್ಟಿನಿಂದ ಶಿವಾರ್ಚಕ ಸಮಾಜವನ್ನು ಕಟ್ಟಿಕೊಳ್ಳಲು ಜಾತಿ ಗಣತಿಯಲ್ಲಿ ಇದೇ ಹೆಸರು ನಮೂದಿಸಲು ಮುಂದಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಾರ್ಚಕ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ರಾಜ್ಯ ಸಂಘದ ಗೌರವಾಧ್ಯಕ್ಷ ಅಂಬಳೆ ಶಿವಣ್ಣ, ಎಚ್.ಡಿ.ಕೋಟೆ, ಸರಗೂರು ತಾಲೂಕು ಶಿವಾರ್ಚಕ ಸಂಘದ ಅಧ್ಯಕ್ಷ ಕೆ.ಜಿ.ಯಶ್ವಂತ್, ಬೆಟ್ಟದ ಪಾರುಪತ್ತೇದಾರ್ ಮಹದೇವಸ್ವಾಮಿ, ರವಿಶಾಸ್ತ್ರಿ, ಸಂಘದ ಗೌರವಾಧ್ಯಕ್ಷ ನಾಗರಾಜಪ್ಪ ಕಲ್ಲಂಬಾಳು, ಸಿ.ನಾಗರಾಜು ಸುಬ್ಬಣ್ಣ, ಸಂಘದ ಉಪಾಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಯದರ್ಶಿ ಕುಂದೂರು ವೀರಣ್ಣ, ಖಜಾಂಚಿ ಕುಂದೂರು ಶಿವಕುಮಾರ್, ಸಲಹೆಗಾರರು ನಂಜುಂಡಸ್ವಾಮಿ, ಎಂ.ಎಸ್.ಜಗದೀಶ್, ಸಂಘದ ನಿರ್ದೇಶಕರಾದ ರವಿಕುಮಾರ್, ರಾಜಜ್ಞಾಪಿ, ನಂಜಪ್ಪ, ಮಹದೇವಪ್ಪ, ಎನ್.ಚಂದ್ರಪ್ಪ, ಸುರೇಶ್, ಸತೀಶ್, ನೀಲಕಂಠ, ನಟರಾಜು, ಸೋಮಣ್ಣ, ಮೇಘಾವತಿ ರಘುಕೀರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net