ಜಾತಿಗಣತಿ ಸಮಯ ವಿಸ್ತರಿಸಿ

ಕಂಪ್ಲಿ ಜೆಸ್ಕಾಂ ಎಇ ವಿನೋದ್‌ಕುಮಾರ್ ಬ್ಯಾಲಾಳ್‌ಗೆ ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಬಿ.ಗಂಗಾಧರ, ಸಂಘದ ಗೌರವಾಧ್ಯಕ್ಷ ಬಿ.ಹನುಮಂತಪ್ಪ, ಉಪಾಧ್ಯಕ್ಷ ಲಕ್ಷ್ಮೀರೆಡ್ಡಿ, ನಂ.10ಮುದ್ದಾಪುರ ಘಟಕದ ಅಧ್ಯಕ್ಷ ಬಿ.ಶಂಕರ್, ಉಪಾಧ್ಯಕ್ಷ ನೀಲಪ್ಪ ಭೋವಿ ಇತರರಿದ್ದರು.

Published on

ಕಲಬುರಗಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಸಮೀಕ್ಷೆಯಲ್ಲಿ ದತ್ತಾಂಶ ಸಮೀಕ್ಷೆ ಆಮೆಗತಿಯಲ್ಲಿ ಸಾಗುತ್ತಿದ್ದು, ಈ ಕರ‍್ಯಕ್ಕೆ ಹೆಚ್ಚಿನ ಸಮಯ ನೀಡಬೇಕು ಎಂದು ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಹಾದೇವ ಮೋಘಾ ಒತ್ತಾಯಿಸಿದರು.

ಜಾತಿಗಣತಿಯಲ್ಲಿ ಗಣತಿದಾರರು ಕೆಲವು ಕಡೆ ಆಧಾರ ಕರ‍್ಡ್​ ಇದ್ದರೂ ಪಡಿತರ ಚೀಟಿಗಳು ಇದ್ದರೆ ಮಾತ್ರ ಜಾತಿಗಣತಿ ಮಾಡುವುದಾಗಿ ಮತ್ತು ವೋಟರ್​ ಐಡಿ ಇದ್ದರೆ ಮಾತ್ರ ಸಮೀಕ್ಷೆಗೆ ಒಳಪಡಿಸಲಾಗುವುದು ಎಂದು ಗೊಂದಲ ಮೂಡಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಗಣತಿದಾರರಿಗೆ ಪರ‍್ಣಪ್ರಮಾಣದ ಮಾಹಿತಿ ಕೊರತೆಯಿಂದ ಗೊಂದಲ ಮೂಡುತ್ತಿದೆ. ಉತ್ತಮ ತರಬೇತಿದಾರರನ್ನು ನಿಯೋಜಿಸಬೇಕು. ತಾಂತ್ರಿಕ ದೋಷವಾಗದಂತೆ ಸರಿಯಾದ ನರ‍್ವಹಣೆ ಮಾಡಬೇಕು. ಗಣತಿದಾರರಿಗೆ ವ್ಯಾಪ್ತಿ ಹೆಚ್ಚಾಗಿರುವುದರಿಂದ ಪ್ರತಿ ವರ‍್ಡ್​ಗೆ ಇಬ್ಬರು ಗಣತಿದಾರರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಗಣತಿದಾರರಿಗೆ ವ್ಯಾಪ್ತಿಯು ಹೆಚ್ಚಾಗಿದ್ದು, ಪ್ರತಿ ವರ‍್ಡ್​ ವಿಶೇಷವಾಗಿ ನಗರ ಪ್ರದೇಶದಲ್ಲಿ ಇಬ್ಬರು ಗಣತಿದಾರರನ್ನು ನೇಮಿಸಬೇಕು. ತಾಂತ್ರಿಕ ದೋಷ ತಕ್ಷಣ ಪರಿಹರಿಸಬೇಕು. ಕಲ್ಯಾಣ ರ‍್ನಾಟಕ ಭಾಗದಲ್ಲಿ ಬೇಡ ಜಂಗಮ ಜಾತಿ ಇರುವುದಿಲ್ಲ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ದಾಖಲಿಸಲು ಗಣತಿದಾರರಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ವಿಶಾಲ ರ‍್ಗಿ, ಸಂಪತಕುಮಾರ, ಅರುಣ ಭರಣಿ, ಗೌತಮ ಬರ‍್ಲೆ, ಚಂದ್ರಕಾಂತ ವಾಲಿ, ಪ್ರಭು ಪಟ್ಟಣಕರ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net