ಜಾತಿಗಣತಿ ವರದಿ ಬಗ್ಗೆ ಎಚ್ಡಿಕೆಗೆ ಸಿದ್ದು ಗುದ್ದು !

c99c9eca-c9d2-4144-959c-6b3511255e9e
Published on

ಬಾಗಲಕೋಟೆ: ಆಡಳಿತ ಪಕ್ಷದಲ್ಲಿ ಪರ ವಿರೋಧಕ್ಕೆ ಕಾರಣವಾಗಿರುವ ಜಾತಿ ಗಣತಿ ವರದಿ ಬಗ್ಗೆ ದಿನೇ ದಿನೇ ಚರ್ಚೆ ಕಾವು ಪಡೆದುಕೊಳ್ಳುತ್ತಿದೆ. ಏತನ್ಮಧ್ಯ ಜಾತಿ ಗಣತಿ ವರದಿ ಬಿಡುಗಡೆ ಮಾಡಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದ ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರೆ. ವರದಿಯಲ್ಲಿ ಏನಿದೆ ಎಂದು ಕುಮಾರಸ್ವಾಮಿ ಗೊತ್ತಾ…? ಕೇಳಿದಿಯಾ ನೀನು…? ರಾಜಕೀಯವಾಗಿ ಏನೋ ಹೇಳುತ್ತಿದ್ದಾರೆ. ನೀವೇಕೆ ನನ್ನ ಕೇಳುತ್ತೀರಿ ಎಂದು ಮಾಧ್ಯಮದವರ ಮೇಲೆ ಕಿಡಿಕಿಡಿಯಾಡಿದ್ದಾರೆ.

ಬಾಗಲಕೋಟೆ ಹೆಲಿಪ್ಯಾಡ್ ನಲ್ಲಿ ಗುರುವಾರ ಸುದ್ದಿಗಾರರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವರದಿ ಏನಿದೆ ಎಂದು ಗೊತ್ತಿಲ್ಲ. ಅದು ಬಂದ ಮೇಲೆ ನೋಡೋಣ. ಅದರಲ್ಲಿ ಹಂಗಿರಬಹುದು, ಹಿಂಗಿರಬಹುದು ಎನ್ನುವ ಊಹೆಗಳು ಒಳ್ಳೆಯದಲ್ಲ ಎಂದರು. ಈ ವೇಳೆ ಕುಮಾರಸ್ವಾಮಿ ಹೇಳಿಕೆ ಪ್ರಸ್ತಾಪಿಸುತ್ತಿದ್ದಂತೆ ಗರಂ ಆದ ಸಿಎಂ, ಮಾಜಿ ಮುಖ್ಯಮಂತ್ರಿ ಯಾವ… ಎಂದು ಏನೋ ಹೇಳಲು ಹೋಗಿ ತಕ್ಷಣವೇ ಎಚ್ಚೆತ್ತುಕೊಂಡು ಯಾರೇ ಇರಲಿ ಅವರಿಗೆ ಆ ಬಗ್ಗೆ ಗೊತ್ತಿರಬೇಕು ಎಂದು ಹೇಳಿದರು.

ಜಾತಿ ಗಣತಿ ವರದಿಯಿಂದ ಸಮಾಜ ಒಡೆಯುತ್ತದೆ ಎಂದರೆ ಏನು? ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಜಾತಿ ಗಣತಿ ಮಾಡಿಸಿದರು. ಅವರು ಸಮಾಜ ಒಡೆದರಾ? ಹೇಳಿಕೆ ಕೊಡಬೇಕಾದರೆ ಅದು ಸತ್ಯ ಇರಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net