ಹೊಸಪೇಟೆ : ಜಾತಿ ಸಮೀಕ್ಷೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿರುವುದು ಸ್ವಾಗತಾರ್ಹ ಕ್ರಮ ಎಂದು ಅತಿ ಹಿಂದೂಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಎಂ.ಸಿ.ವೇಣುಗೋಪಾಲ ತಿಳಿಸಿದರು.
1931 ರಿಂದ ಈ ವರೆಗೂ ಜಾತಿ ಸಮೀಕ್ಷೆಯಾಗಿರಲಿಲ್ಲ, ಸಂವಿಧಾನದಲ್ಲಿ ನೀಡಿದ ಸೌಕರ್ಯಗಳನ್ನು ನೀಡಲು ಜಾತಿಯ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿಯಲು ಸಹಕಾರಿಯಾಗಲಿದೆ. ಸಮಾಜದ ಎಲ್ಲಾ ವರ್ಗದವರು ಸಂವಿದಾನದ ಸೌಕರ್ಯಗಳು ದೊರೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ಜಾತಿ ಸಮೀಕ್ಷೆಗೆ ಸಹಕಾರ ನೀಡಬೇಡಕು. ಜಾತಿಯ ಸಮೀಕ್ಷೆಯಲ್ಲಿರುವ ಗೊಂದಲಗಳನ್ನು ಸರಿಪಡಿಸಲು ಈಗಾಗಲೇ ಜಾತಿಯ ಸಮುದಾಯಗಳ ಮುಖಂಡರುಗಳು ಮನವಿ ಸಲ್ಲಿಸಿದ್ದು ಅವುಗಳನ್ನು ಸರಿಪಡಿಸುವ ಭರವಸೆಯನ್ನು ವ್ಯಕ್ತಪಡಿಸಲಾಗಿದೆ. ಸಮೀಕ್ಷೆಯ ವರದಿಯ ನಂತರ ಆಗಬಹುದಾದ ಸಣ್ಣ ಪುಟ್ಟಗೊಂದಲಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮತಿಸಿದ್ದಾರೆ ಎಂದರು.
ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಎಲ್ಲಾ ಸಮುದಾಯಗಳ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಸಹಕಾರಿಯಾಗಲಿ. ಎಲ್ಲಾ ವರ್ಗದಲ್ಲಿ ಕಡುಬಡವರು ಇದ್ದು ಎಲ್ಲರೂ ಪ್ರಗತಿ ಸಾಧಿಸಲು ಜಾತಿ ಗಣತಿ ಸಹಕಾರಿಯಾಗಲಿದೆ ಎಂದರು.
ನಗರಸಭೆಯ ಅಧ್ಯಕ್ಷ ಎನ್.ರೂಪೇಶ ಕುಮಾರ, ಮಾಜಿ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಪ್ರಮುಖರಾದ ಬಸವರಾಜ್, ಚಂದ್ರಣ್ಣ ಇತರರಿದ್ದರು.